Breaking
23 Mar 2026, Mon

ತೊಕ್ಕೊಟ್ಟು ಫಾಸ್ಟ್ ಟ್ರ್ಯಾಕ್ ಸೈಕಲ್ ಶಾಪ್‌ ನಲ್ಲಿ ಹಣ ಕಳ್ಳತನ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಮಂಗಳೂರು: ತೊಕ್ಕೊಟ್ಟು ಫಾಸ್ಟ್ ಟ್ರ್ಯಾಕ್ ಸೈಕಲ್ ಶಾಪ್‌ ನ ಕ್ಯಾಶ್ ಪೆಟ್ಟಿಗೆಯಿಂದ ಹಣ ಕಳ್ಳತನವಾದ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ ರಸ್ತೆಬದಿಯಲ್ಲಿ ಪೊಲೀಸ್ ವಾಹನ ಬಂದು ನಿಂತಿರುವುದನ್ನು ಗಮನಿಸಿದ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿಗಳು ಅದರ ಕುರಿತು ವಿಚಾರ ತಿಳಿಯಲೆಂದು ಹೊರಗೆ ತೆರಳಿದ್ದರು. ಈ ವೇಳೆ ಸುತ್ತಮುತ್ತಲ ಅಂಗಡಿಗಳಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಅಪರಿಚಿತ ವ್ಯಕ್ತಿಯೊಬ್ಬರು ಶಾಪ್‌ ನ ಒಳಗೆ ಹೋಗಿ ಕ್ಯಾಶ್ ಪೆಟ್ಟಿಗೆಗೆ ಕೈ ಹಾಕಿ ಹಣವನ್ನು ಕದ್ದಿದ್ದಾನೆ. ಈ ಕಳ್ಳತನದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *