Breaking
23 Mar 2026, Mon

ಸಂತೋಷ್ ಮೊಗವೀರ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಉಡುಪಿ: ಕೊಟತಟ್ಟುವಿನ ಪಡುಕೆರೆಯಲ್ಲಿ ನಡೆದ ಸಂತೋಷ್ ಮೊಗವೀರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪರಂಪಳ್ಳಿಯ ದರ್ಶನ್, ಕೌಶಿಕ್ ಪಾಂಡೇಶ್ವರ, ಕೋಟತಟ್ಟುವಿನ ಪಡುಕೆರೆಯ ಅಂಕಿತ್ ಮತ್ತು ಸುಜನ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಡಿ.14ರಂದು ತಡರಾತ್ರಿ ಸಂತೋಷ್ ಮೊಗವೀರ, ಅಂಕಿತ್, ಚೇತನ್, ಕೌಶಿಕ್, ಸುಜನ್ ಮತ್ತು ದರ್ಶನ್ ಬಾರ್‌ ನಲ್ಲಿ ಪಾರ್ಟಿ ಮುಗಿಸಿ ಪಡುಕೆರೆಯ ಸರ್ಕಲ್ ಗೆ ಬಂದು ಮಾತಲ್ಲೇ ವಾಗ್ವಾದ ನಡೆಸಿದ್ದಾರೆ. ಈ ವೇಳೆ ದರ್ಶನ್, ಸಂತೋಷ್‌ ಅವರ ಕುತ್ತಿಗೆಯ ಹಿಂಬದಿಗೆ ಕೈಯಿಂದ ಬಲವಾಗಿ ಹೊಡೆದಿದ್ದಾನೆ. ಕೌಶಿಕ್ ಕೂಡಾ ಕೈಯಿಂದ ಹೊಡೆದಿದ್ದಾನೆ. ರಜತ್ ಇವರ ಜಗಳವನ್ನು ನಿಲ್ಲಿಸಿದ್ದಾರೆ. ಆದರೆ ಅಷ್ಟರಲ್ಲಿ ಹಲ್ಲೆಗಳೊಗಾದ ಸಂತೋಷ್ ಅಲ್ಲಿಯೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ತಕ್ಷಣ ಸ್ಥಳೀಯರ ಸಹಕಾರದಿಂದ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಂತೋಷ್ ಮೃತಪಟ್ಟಿದ್ದಾರೆ.

ಸದ್ಯ ನಾಲ್ವರು ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *