Breaking
23 Mar 2026, Mon

ಜೈನ್ ಐದನೇ ಮಿಲನ್ ಮಾಸಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ

ಬಂಟ್ವಾಳ: ಜೈಮಿಲನ್ ಬಂಟ್ವಾಳ ಮತ್ತು ಕೂಡಿಬೈಲು ಬಸದಿ ಹಾಗೂ ಫಾಣಂತ ಬೈಲು ಬಸದಿಯ ಆಡಳಿತ ಸಮಿತಿಯ ಸಹಯೋಗದಲ್ಲಿ ಕೂಡಿಬೈಲು ಬಸದಿಯಲ್ಲಿ ಜೈನ್ ಐದನೇ ಮಿಲನ್ ಮಾಸಿಕ ಸಭೆಯು ಹಾಗೂ ಸನ್ಮಾನ ಕಾರ್ಯಕ್ರಮವು ಡಿ. 14 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಂದ್ರ ಜೈನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಡಿಬೈಲು ಬಸದಿ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಕೆ. ಅಭಯಚಂದ್ರ ಜೈನ್, ಕರ್ನಾಟಕ ಸರ್ಕಾರದ ಮಾಜಿ ಸಚಿವ ಸುಮಂತ್ ಕುಮಾರ್, ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅರ್ಖಕೀರ್ತಿ ಹೆಗಡೆ, ವಿತರಾಗ ಕೈಯಳದ ನಿವೃತ್ತ ಅಧ್ಯಾಪಕರು ಹಾಗೂ ಎಸ್.ಡಿ.ಎಂ. ಧರ್ಮಸ್ಥಳದ ಸನ್ಮಾನಿತ ಲಾವಣ್ಯ ಬಲ್ಲಾಳ್, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಸರಣ ನಿಗಮದ ಅಧ್ಯಕ್ಷರಾದ ಉದಯಕುಮಾರ್ ಮಧ್ವಾ, ರಾಜಮ್ಮ ಪದ್ಮಶೇಖರ್ ರಾವ್, ಆದಿರಾಜ ಜೈನ್, ಬಾಲಚಂದ್ರ ಜೈನ್, ಯುವರಾಜ್ ಜೈನ್ ಉಪಸ್ಥಿತರಿದ್ದರು. ಉಪಾಧ್ಯಕ್ಷರಾಗಿ ವೀರ ಸುದರ್ಶನ್ ಜೈನ್ ಭಾಗವಹಿಸಿದ್ದರು.

ಭಾರತೀಯ ಜೈನ್ ವಿಲನ್ ಸಂಭ್ರಮದಿಂದ ಕೂಡಿ ಬೈಲು ಬಸ್ತಿ ಯ ಆವರಣದಲ್ಲಿ ಜರಗಿತು.

ಜಿನ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಭಜನಾ ಸ್ಪರ್ಧಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ವೀರ್ ಭರತ್ ಕುಮಾರ್ ಸಿದ್ದಕಟ್ಟೆ ನಡೆಸಿಕೊಟ್ಟರು. ಕಖ್ಯಾಪದವು ಪಾರ್ಶ್ವನಾಥ್ ಸ್ವಾಗತಿಸಿ, ಕಾರ್ಯದರ್ಶಿ ಜಯಕೀರ್ತಿ ವರದಿಯನ್ನು ವಾಚಿಸಿದರು. ಸಂದೇಶ ಇಂದ್ರ ಕೂಡಿ ಬಯಲು ಬೈಲು ವಂದಿಸಿದರು.

Leave a Reply

Your email address will not be published. Required fields are marked *