ಬಂಟ್ವಾಳ : ಮನುಷ್ಯನ ಅಂತಃಶಕ್ತಿ ಹೆಚ್ಚಿದಂತೆ ಅವನ ಆತ್ಮವಿಶ್ವಾಸವು ಹೆಚ್ಚುತ್ತದೆ. ನಾರಾಯಣ ಗುರುಗಳ ಪ್ರಖಾಂಡ ಪಾಂಡಿತ್ಯ ಅವರ ವಿರೋಧಿಗಳನ್ನು ನಿಸ್ತೇಜರನ್ನಾಗಿಸಿತ್ತು. ಅವರು ಪ್ರತಿಪಾದಿಸಿದ ಮೌನಕ್ರಾಂತಿ ಇಂದಿನ ಯುವಪೀಳಿಗೆಗೆ ದಾರಿದೀಪವಾಗಬೇಕು ಎಂದು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ತುಕರಾಮ ಪೂಜಾರಿ ತಿಳಿಸಿದರು
.ಅವರು ರವಿವಾರ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಗುರುದೀಪ ರಾಜೇಶ್ ಸುವರ್ಣ ರವರ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 20 ರ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಮಾತನಾಡಿದರು.
ಭಜನಾ ಸಂಕೀರ್ತನೆಯ ಮೂಲಕ ನಾರಾಯಣಗುರುಗಳ ಸಂದೇಶಗಳನ್ನು ಯುವಜನತೆಯ ತಲುಪಿಸುವ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದು ಕುದ್ರೋಳಿ ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್ ತಿಳಿಸಿದರು.
ಗುರುತತ್ವವಾಹಿನಿ ಎಂಬ ವಿನೂತನ ಕಾರ್ಯಕ್ರಮದ ರೂವಾರಿಗಳಾದ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಹಾಗೂ ನಾರಾಯಣಗುರು ತತ್ವಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ಕಾರ್ಯದರ್ಶಿ ಚೇತನ್ ಮುಂಡಾಜೆ,ಜೊತೆ ಕಾರ್ಯದರ್ಶಿ ಸುನೀಲ್ ಸಾಲ್ಯಾನ್ ರಾಯಿ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಧನುಷ್ ಮಧ್ವ, ಉದಯ್ ಮೆನಾಡ್, ಮಧುಸೂದನ್ ಮಧ್ವ, ಪುರುಷೋತ್ತಮ ಕಾಯರ್ ಪಲ್ಕೆ, ಹರಿಣಾಕ್ಷಿ ನವೀಶ್ ನಾವೂರು, ಕಿರಣ್ ಪೂಂಜರೆಕೋಡಿ,ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಕೊಟ್ಯಾನ್ ಕುದನೆ,ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಗಣೇಶ್ ಪೂಂಜರೆಕೋಡಿ, ಪ್ರೇಮನಾಥ್ ಕೆ, ಶಿವಾನಂದ ಎಂ, ರಾಜೇಶ್ ಸುವರ್ಣ, ಅರುಣ್ ಕುಮಾರ್, ಶ್ರೀಧರ್ ಅಮೀನ್, ಸದಸ್ಯರಾದ, ಪ್ರಶಾಂತ್ ಏರಮಲೆ,ನಾಗೇಶ್ ಏಲಬೆ, ಹರೀಶ್ ಅಜೆಕಲಾ,ಸುಲತಾ ಸಾಲ್ಯಾನ್, ,ನಯನಾ ಜಯ ಪಚ್ಚಿನಡ್ಕ, ಜಯ ಪಚ್ಚಿನಡ್ಕ,ಭವಾನಿ ಅಮೀನ್ ,ಸುದೀಪ್ ಸಾಲ್ಯಾನ್ ರಾಯಿ, ಅರ್ಜುನ್ ಅರಳ, ಯತೀಶ್ ಬೊಳ್ಳಾಯಿ, ನಾಗೇಶ್ ಎಮ್ ,ಶೈಲಜಾ ರಾಜೇಶ್, ಚಿನ್ನಾ ಕಲ್ಲಡ್ಕ,ರಚನಾ ಕರ್ಕೇರ, ಶ್ರವಣ್ ಅಜ್ಜಿಬೆಟ್ಟು, ಕಾರ್ತಿಕ್ ಸಜಿಪ,ಅಶ್ಮಿತಾ ಹರೀಶ್ ಅಜೆಕಲಾ,ವತ್ಸಲಾ ರಘುರಾಮ್ ಸುವರ್ಣ ಕೊಲ್ಯ ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು