ಬೆಳ್ತಂಗಡಿ: ದೇಶದ ಸೈನ್ಯದಲ್ಲಿ ಅನನ್ಯ ಸೇವೆಗೈದು ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಮೊಗ್ಗ್ರು ಗ್ರಾಮದ ಮುಗೇರಡ್ಕದ ಅಶೋಕ್ ಪಿ.ಎಲ್ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್(ರಿ.) ಗುರುವಾಯನಕೆರೆ ತಾಲೂಕು, ಕಣಿಯೂರು ವಲಯದ ಮೊಗ್ಗ್ರು ಒಕ್ಕೂಟದ ವತಿಯಿಂದ ಉಂತಾನಾಜೆ ಲಕ್ಷ್ಮೀ ನಾರಾಯಣ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮವು ಡಿ. 15 ರಂದು ನಡೆಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಗಂಗಾಧರ್,ಉಪಾಧ್ಯಕ್ಷರಾದ ಕೃಷ್ಣ ಬೆಲ್ಚಡ, ಕೋಶಾಧಿಕಾರಿ ಕಮಲ, ಕಾರ್ಯದರ್ಶಿ ನವೀನ್ ಗೌಡ, ಜೊತೆ ಕಾರ್ಯದರ್ಶಿ ವಸಂತಿ ಹಾಗೂ ಕಣಿಯೂರು ವಲಯದ ಮೇಲ್ವಿಚಾರಕಿ ಕು.ಶಿಲ್ಪಾ, ಸೇವಾಪ್ರತಿನಿಧಿ ಸರೋಜ, ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.






