Breaking
23 Mar 2026, Mon

ಬಂಟ್ವಾಳದಲ್ಲಿ ಮದುವೆ ಮನೆಯಿಂದ ಮದುಮಗಳು ನಾಪತ್ತೆ!- ದೂರು ದಾಖಲು

ಬಂಟ್ವಾಳ: ಮದುವೆ ಮನೆಯಿಂದ ಮದುಮಗಳು ನಾಪತ್ತೆಯಾದ ಘಟನೆ ಬಿಸಿರೋಡಿನ ಪಲ್ಲಮಜಲು ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ಯುವತಿಯನ್ನು ಪಲ್ಲಮಜಲು ನಿವಾಸಿ ಅಶ್ಪಿಯ ( 21) ಎಂದು ಗುರುತಿಸಲಾಗಿದೆ.

ಡಿ.14 ರಂದು ಅಶ್ಪಿಯಳನ್ನು ಮಂಗಳೂರಿನ ಯುವಕನೋರ್ವನಿಗೆ ಮದುವೆ ಮಾಡುವುದಾಗಿ ಹಿರಿಯರೊಂದಿಗೆ ಮಾತುಕತೆ ನಡೆಸಿ ಯುನಿಟಿ ಹಾಲ್ ನಲ್ಲಿ ಮದುವೆ ನಿಶ್ಚಯಿಸಿದ್ದರು.

ಮದುವೆ ದಿನ ಬೆಳಗ್ಗೆ ಸುಮಾರು 3:30 ಗಂಟೆ ತನಕ ಮದುಮಗಳು ಮನೆಯಲ್ಲೇ ಮಲಗಿದ್ದಳು ಎನ್ನಲಾಗಿದೆ. ಆ ಬಳಿಕ ಬೆಳಗಿನ ಜಾವ ಸುಮಾರು 4:30 ಗಂಟೆಗೆ ನೋಡಿದಾಗ ಮನೆಯಲ್ಲಿ ಇಲ್ಲದೇ ಇರುವುದು ತಿಳಿದು ಬಂದಿದೆ. ಬಳಿಕ ಎಲ್ಲ ಕಡೆ ಹುಡುಕಾಡಿದರು ಸಿಗದೇ ಇರುವುದರಿಂದ ಮನೆಯವರು ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *