Breaking
25 Sep 2026, Fri

ಡಿ.14: ಬೆಳ್ತಂಗಡಿಯಲ್ಲಿ ತಾಲೂಕು ಮಟ್ಟದ ವಾಲಿಬಾಲ್,ತ್ರೋಬಾಲ್ ಹಾಗೂ ಹಗ್ಗಜಗ್ಗಾಟ ಪಂದ್ಯಾಟ

ಬಂದಾರು: ಶಿವಫ್ರೆಂಡ್ಸ್ ಕುರಾಯ -ಖಂಡಿಗ ಮೈರೋಳ್ತಡ್ಕ -ಬಂದಾರು ಗ್ರಾಮ, ಇದರ ಆಶ್ರಯದಲ್ಲಿ ತಾಲೂಕು ವಾಲಿಬಾಲ್ ಅಸೋಶಿಯೇಷನ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ 10 ನೇ ವರ್ಷದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ, ಪುರುಷರ ಮತ್ತು ಮಹಿಳೆಯರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟವು ಡಿ.14 ರಂದು ಮೈರೋಳ್ತಡ್ಕದ ಖಂಡಿಗ ಮೈದಾನದಲ್ಲಿ ನಡೆಯಲಿದೆ.

ಬೆಳಗ್ಗೆ 9.00 ಗಂಟೆಗೆ ಪಂದ್ಯಕೂಟ ಉದ್ಘಾಟನೆಯಾಗಲಿದ್ದು ಸಂಜೆ 6.0 ಗಂಟೆಗೆ ಶಾಸಕ ಹರೀಶ್ ಪೂಂಜ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *