Breaking
10 May 2026, Sun

ಮಂಜೇಶ್ವರದ ಉಪ್ಪಳದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಮಂಜೇಶ್ವರ: ಉಪ್ಪಳ ಸೋಂಕಾಲು ಎಂಬಲ್ಲಿ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಮೃತಪಟ್ಟವರನ್ನು ಸೋಂಕಾಲು ಕೊಡಂಗೆ ರಸ್ತೆಯ ಮೊಯ್ದೀನ್ ಸವಾದ್ ರವರ ಪತ್ನಿ ಫಾತಿಮ್ಮತ್ ನಬೀನಾ( 25) ಎಂದು ಗುರುತಿಸಲಾಗಿದೆ.

ಐದು ತಿಂಗಳ ಮಗುವಿನ ತಾಯಿಯಾದ ಫಾತಿಮ್ಮತ್ ನಬೀನಾ ಅವರು ಮನೆಯ ಬೆಡ್ ರೂಂ ನ ಕಿಟಿಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಮನೆಯವರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.

ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *