Breaking
22 Mar 2026, Sun

ಶಾಲಾ ವಾಹನ ಹರಿದು 8 ವರ್ಷದ ಬಾಲಕಿ ಸಾವು

ಬೀದರ್‌ : ಶಾಲಾ ವಾಹನ ಹರಿದು ಬಾಲಕಿಯೋರ್ವಳು ಮೃತಪಟ್ಟ ಘಟನೆ ಬೀದರ್‌ನ ಜನವಾಡಾ ಗ್ರಾಮದಲ್ಲಿ ಡಿ.09ರಂದು ನಡೆದಿದೆ.

ಮೃತಪಟ್ಟ ಬಾಲಕಿಯನ್ನು ಔರಾದ್ ತಾಲೂಕಿನ ಗಡಿಕುಶನೂರ್ ಗ್ರಾಮದ ರುತ್ವಿ (8) ಎಂದು ಗುರುತಿಸಲಾಗಿದೆ.

ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ ರುತ್ವಿ ಸಂಜೆ ವೇಳೆ ಶಾಲಾ ವಾಹನದಲ್ಲಿ ಮನೆಗೆ ಬಂದು ಶಾಲಾ ವಾಹನದಿಂದ ಇಳಿದು ಪಕ್ಕದಲ್ಲಿ ನಿಂತಿದ್ದಳು. ಈ ವೇಳೆ ಚಾಲಕ ಬಾಲಕಿ ನಿಂತಿರುವುದನ್ನು ಗಮನಿಸದೇ ಆಕೆಯ ಮೇಲೆಯೇ ವಾಹನ ಹರಿಸಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಕೊನೆಯುಸಿರೆಳೆದಿದ್ದಾಳೆ.

ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *