Breaking
27 Sep 2026, Sun

ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರ ಮನೆಗೆ ನೀಡಲು ಹೊರಟ ವ್ಯಕ್ತಿ ಮನೆಗೆ ವಾಪಸ್ಸಾಗದೇ ನಾಪತ್ತೆ

ಮಂಗಳೂರು: ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರ ಮನೆ ಹಾಗೂ ಸ್ನೇಹಿತರಿಗೆ ನೀಡುತ್ತೇನೆಂದು ಮನೆಯಿಂದ ಹೇಳಿ ಹೊರಟ ವ್ಯಕ್ತಿ ಮನೆಗೆ ವಾಪಸ್ಸಾಗದೇ ಕಾಣೆಯಾಗಿರುವ ಘಟನೆ ಡಿ. 6 ರಂದು ನಡೆದಿದೆ.

ಕಾಣೆಯಾದ ವ್ಯಕ್ತಿಯನ್ನು ರಕ್ಷಣ್ ಜೆ.ಕೆ. (32) ಎಂದು ಗುರುತಿಸಲಾಗಿದೆ.

ನಾಪತ್ತೆಯಾದ ವ್ಯಕ್ತಿ ಸುಮಾರು 5.8 ಅಡಿ ಎತ್ತರ, ಸಧೃಡ ಶರೀರ, ಗೋಧಿ ಮೈ ಬಣ್ಣ. ರಕ್ಷಣ್ ಕಾಣೆಯಾದ ದಿನ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದರು. ತುಳು ಕನ್ನಡ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಣ್ ಪ್ರಯಾಣಿಸಿದ್ದ ಕಾರು ಅದೇ ದಿನ ರಾತ್ರಿ 10:30ಕ್ಕೆ ನಗರದ ಟೌನ್‌ಹಾಲ್ ಬಳಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *