Breaking
23 Mar 2026, Mon

ಕಂಬಳದ ಅಡ್ಡ ಹಲಗೆ ವಿಭಾಗದ ಚಾಂಪಿಯನ್ ಬೋಳಾರ ಕುಟ್ಟಿ ಕೋಣ ನಿಧನ

ಮಂಗಳೂರು: ಕಂಬಳದಲ್ಲಿ ಅಡ್ಡ ಹಲಗೆ ಹಾಗೂ ಕನೆಹಲಗೆ ವಿಭಾಗದಲ್ಲಿ ಅಭೂತಪೂರ್ವ ಸಾಧನೆ ಮಾಡಿ ಗಮನ ಸೆಳೆದು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಬೋಳಾರ ಕುಟ್ಟಿ ಕೋಣ ಡಿ. 05ರಂದು ನಿಧನ ಹೊಂದಿದೆ.

2019ರಲ್ಲಿ ಬೋಳಾರ ತ್ರಿಶಾಲ್‌ ಕೆ.ಪೂಜಾರಿ ಅವರು ಕುಟ್ಟಿಯನ್ನು ಸುರತ್ಕಲ್‌ ಸರ್ವೋತ್ತಮ ಮಾಧವ ಪ್ರಭು ಅವರಿಂದ ಖರೀದಿಸಿದ್ದರು. ಬೋಳಾರ ಕುಟ್ಟಿಕೋಣ ತನ್ನ ಮಿಂಚಿನ ಓಟದೊಂದಿಗೆ 150ಕ್ಕೂಅಧಿಕ ಪದಕ ಪಡೆದು ಕಂಬಳದಲ್ಲಿ ವಿಶೇಷ ಸ್ಥಾನ ಪಡೆದಿತ್ತು .

ಕಳೆದ ಕಂಬಳದ ಸಂದರ್ಭ ಅದರ ಕೊಂಬಿಗೆ ಗಾಯವಾಗಿದ್ದು, ಬಳಿಕ ವೈದ್ಯರು ಪರೀಕ್ಷಿಸಿದಾಗ ಅನಾರೋಗ್ಯಕ್ಕೀಡಾಗಿರೋದು ಗೊತ್ತಾಗಿದೆ. ಆ ನಂತರ ತನ್ನ ಓಟವನ್ನು ನಿಲ್ಲಿಸಿದ ಕುಟ್ಟಿ ಕೋಣ ನಿನ್ನೆ ಅಸುನೀಗಿದೆ.

ಕೋಣದ ನಿಧನಕ್ಕೆ ಕಂಬಳ ಅಭಿಮಾನಿಗಳು, ಮಾಲಕರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *