Breaking
22 Mar 2026, Sun

ಮಂಗಳೂರು: COIN SHOW INDIA – 2025 : ಪ್ರವೇಶ ಉಚಿತ

ಮಂಗಳೂರು: THE ANCIENT TIMES ವತಿಯಿಂದ ಆಯೋಜಿಸಲಾದ 5ನೇ ನಾಣ್ಯ ಪ್ರದರ್ಶನವು ಡಿಸೆಂಬರ್ 5ರಿಂದ 7ರವರೆಗೆ ಮಂಗಳೂರಿನ ಮಂಗಳ ಹಾಲ್‌ನಲ್ಲಿ ನಡೆಯಲಿದೆ.

ಈ ಪ್ರದರ್ಶನದಲ್ಲಿ ಭಾರತದ ಪ್ರಾಚೀನ ನಾಣ್ಯಗಳಿಂದ ಹಿಡಿದು ಗಣರಾಜ್ಯ ಭಾರತದ ನಾಣ್ಯಗಳವರೆಗೆ ವಿವಿಧ ನಾಣ್ಯ ಸಂಗ್ರಹಗಳನ್ನು ಪ್ರದರ್ಶಿಸಲಾಗುತ್ತದೆ.

ಕ್ರಿ.ಶ. 2ನೇ ಶತಮಾನದಿಂದ ಆರಂಭವಾದ ರಾಜರಾಜ ಚೋಳ, ಚೇರ, ಚೋಳ, ಪಾಂಡ್ಯ ವಂಶ, ವಿಜಯನಗರದ ಸಾಮ್ರಾಜ್ಯ, ಮೈಸೂರು ಒಡೆಯರ್ ಕಾಲ, ಈಸ್ಟ್ ಇಂಡಿಯಾ ಕಂಪನಿ, ಡಚ್ ಇಂಡಿಯಾ, ಫ್ರೆಂಚ್ ಇಂಡಿಯಾ ಹಾಗೂ ಪ್ರಿನ್ಸ್ಲಿ ಸ್ಟೇಟ್ಸ್ ಆಫ್ ಇಂಡಿಯಾಗಳ ಬೆಳ್ಳಿ, ಬಂಗಾರ ಮತ್ತು ತಾಮ್ರ ನಾಣ್ಯಗಳು ಈ ಪ್ರದರ್ಶನದ ಮುಖ್ಯ ಆಕರ್ಷಣೆ ಆಗಿವೆ.

ಅದೇ ರೀತಿ ಬ್ರಿಟಿಷ್ ಇಂಡಿಯಾ ಕಾಲದ ವಿಕ್ಟೋರಿಯಾ ರಾಣಿ, ರಾಣಿ ಎಲಿಜಬೆತ್–II, ಕಿಂಗ್ ಜಾರ್ಜ್, ಕಿಂಗ್ ಎಡ್ವರ್ಡ್ ಅವರ ಕಾಲದ ನಾಣ್ಯಗಳು, ಯುದ್ಧ ಪದಕಗಳು, ಅಂಚೆ ಚೀಟಿಗಳು ಮತ್ತು ವಿವಿಧ ಪದಕಗಳನ್ನೂ ಪ್ರದರ್ಶಿಸಲಾಗುತ್ತದೆ. ಜೊತೆಗೆ ಪ್ರಾಚೀನ ವಸ್ತುಗಳು, ವಿಂಟೇಜ್ ಸಂಗ್ರಹಗಳು, ಹಳೆಯ ಪೆನ್‌ಗಳು, ಶೋ ಪೀಸ್‌ಗಳು ಕೂಡ ಲಭ್ಯವಿರಲಿವೆ.

ಈ ಪ್ರದರ್ಶನಕ್ಕೆ ಭಾರತದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ಡೀಲರ್‌ಗಳು ಭಾಗವಹಿಸಲಿದ್ದಾರೆ.

ನಿಮ್ಮ ಬಳಿ ಇಂತಹ ನಾಣ್ಯಗಳು ಅಥವಾ ವಸ್ತುಗಳಿದ್ದರೆ, 30 ವರ್ಷಗಳ ಅನುಭವ ಹೊಂದಿರುವ ಮಲಯಾಳಸಾಮಿ (Antiquarian) ಅವರಿಂದ ಉಚಿತ ಮೌಲ್ಯಮಾಪನ ಸೇವೆ ಲಭ್ಯ ಹಾಗೂ ಪ್ರವೇಶ ಉಚಿತ.

Leave a Reply

Your email address will not be published. Required fields are marked *