ಬಂಟ್ವಾಳ : ಮುಗುಳಿಯ ಸಜಿಪ ಮುನ್ನೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಷಷ್ಟಿ ಪೂಜಾ ಮಹೋತ್ಸವದ ಶುಭ ವೇಳೆಯಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ-ಚಮಕ ,ದುರ್ಗಾ ಸೂಕ್ತ ,ಗಣಪತಿ ಅಥರ್ವ ಶೀರ್ಷ ,ಮಂತ್ರ ಪುಷ್ಪ, ಪಠಣ ನೆರವೇರಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ದೇವಸ್ಥಾನದ ಸಮಿತಿ ಅಧ್ಯಕ್ಷ ಜಯ ಶಂಕರ ಬಾಸ್ರೀತಾಯ, ಎ ರವಿ ಶಂಕರ ಮೈಯ್ಯ, ಶಾಂತ ರಾಮ ರಾವ್, ರಾಮಚಂದ್ರ ಮೈಯ್ಯ, ವಿಶಾಲ ಹೆಗಡೆ, ಜಯರಾಮ ಮೈಯ್ಯ, ಧನೇಶ್ವರ ರಾವ್, ಡಾ ಸೋಮಶೇಖರ ಮಯ್ಯ, ನಾರಾಯಣರಾವ್, ಕೃಷ್ಣ ಹೊಳ್ಳ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





