Breaking
23 Mar 2026, Mon

ಗ್ರಾಮಾಭಿವೃದ್ಧಿ ಯೋಜನೆಯಿಂದ ಮನೆ ದುರಸ್ತಿ ಸಹಾಯ ಧನ ಹಸ್ತಾಂತರ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಬಂಟ್ವಾಳ ಘಟಕದ ತುಂಬೆ ವಲಯಕ್ಕೆ ಒಳಪಟ್ಟ ನರಿಕೊಂಬು ಕಾರ್ಯಕ್ಷೇತ್ರದ ಮಲ್ಲಿಗೆ ತಂಡದ ಸದಸ್ಯೆ ಖತಿಜಮ್ಮ ರವರ ಮನೆಗೆ ಗಾಳಿ–ಮಳೆಯ ವೇಳೆ ಮನೆ ಹಾನಿಯಾಗಿದ್ದು ಇದರ ದುರಸ್ತಿಗಾಗಿ ಮಂಜೂರಾದ ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ನರಿಕೊಂಬು ‘ಎ’ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಸಫಲ್ಯ, ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್, ಸೇವಾ ಪ್ರತಿನಿಧಿಗಳು ಕುಸುಮಾವತಿ ಹಾಗೂ ಪ್ರತಿಭಾ, ಹಾಗೂ ಸಂಘದ ಸದಸ್ಯೆ ಆಯೀಸ ಬಾನು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *