ಸಿದ್ದಕಟ್ಟೆ: ಕೊಡಂಗೆಯ ಕಂಬಳ ಸಮಿತಿಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಪೊಡುಂಬ ಅವರ ಅಧ್ಯಕ್ಷತೆಯಲ್ಲಿ ಮೂರನೇ ವರ್ಷದ ‘ಸಿದ್ದಕಟ್ಟೆ–ಕೊಡಂಗೆ ವೀರ ವಿಕ್ರಮ ಕಂಬಳ’ ಇಂದು ಭವ್ಯವಾಗಿ ಉದ್ಘಾಟನೆಗೊಂಡಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಪೂಂಜದ ಪ್ರಧಾನ ಅರ್ಚಕರಾದ ಪ್ರಕಾಶ್ ಆಚಾರ್ಯರು ಕಂಬಳ ಧ್ವಜಾರೋಹಣ ನೆರವೇರಿಸಿದರು. ನಂತರ ಮೂಡಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪ್ರವರ್ತಕರಾದ ಯುವರಾಜ್ ಜೈನ್ ‘ಕರೆ’ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ಕುಡುಂಬೂರುಗುತ್ತು ಶ್ರೀ ಕ್ಷೇತ್ರ ಕನಿಲದ ಗುತ್ತಿನಾರ್ ಜಯರಾಮ ಶೆಟ್ಟಿ, ಚಿಕ್ಕಮಗಳೂರಿನ ಗೋಳಿದೊಟ್ಟು ಉದ್ಯಮಿ ಕರುಣಾಕರ ಶೆಟ್ಟಿ, ರೊ| ಎಲಿಯಾಸ್ ಸಾಂಕ್ಟೀಸ್, ರೊ| ಎನ್. ಪ್ರಕಾಶ್ ಕಾರಂತ, ಕೊಯಿಲದ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ರೊ| ಪದ್ಮರಾಜ ಬಳ್ಳಾಲ್ ಮಾವಂತೂರು ಸೇರಿದಂತೆ ಪದಾಧಿಕಾರಿಗಳು ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.






