Breaking
20 Sep 2026, Sun

ಮನೆಮಂದಿಯ ಎದುರಲ್ಲೇ ಮಗುವನ್ನು ಕಾಡಿನತ್ತ ಎಳೆದೊಯ್ದ ಚಿರತೆ

ಚಿಕ್ಕಮಗಳೂರು : ಚಿರತೆ ದಾಳಿಗೆ 5 ವರ್ಷದ ಮಗು ಬಲಿಯಾದ ಘಟನೆ ತರೀಕೆರೆ ತಾಲೂಕಿನ ಮುಂಡ್ರೆ ಸಮೀಪದ ನವಿಲೇಕಲ್ ಗುಡ್ಡ ಗ್ರಾಮದಲ್ಲಿ ನಡೆದಿದೆ.

ಮೃತ ಮಗುವನ್ನು ಸಾನ್ವಿ(5) ಎಂದು ಗುರುತಿಸಲಾಗಿದೆ.

ಸಾನ್ವಿ ಮನೆಯ ಹಿಂದಿನ ಕೊಟ್ಟಿಗೆಯ ಬಳಿ ಆಟವಾಡುತ್ತಿರುವ ವೇಳೆ ಚಿರತೆ ಏಕಾಏಕಿ ದಾಳಿ ನಡೆಸಿದೆ. ಮಗು ಕೂಗುತ್ತಿರುವ ಶಬ್ಧ ಕೇಳಿ ಮನೆಯವರು ಓಡಿ ಬಂದಿದ್ದು, ಈ ವೇಳೆ ಚಿರತೆ, ಮಗುವನ್ನು ಕಾಡಿನತ್ತ ಎಳೆದುಕೊಂಡು ಹೋಗಿದೆ.

ಸ್ಥಳೀಯರು ಹುಡುಕಾಡಿದಾಗ ಕಾಡಂಚಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *