ಬಂಟ್ವಾಳ: ಕಿರುಚಿತ್ರ ನಿರ್ಮಾಣ ತಂಡದ ಯುವಕರ ನೂತನ ಸಂಸ್ಥೆ ನಿತ್ಯ ಸಾಯಿ ಸಿನಿ ಕ್ರಿಯೇಶನ್ಸ್ ಬಿ.ಸಿ.ರೋಡ್ ಇದರ ಉದ್ಘಾಟನೆ ಮತ್ತು ಲೋಗೋ ಬಿಡುಗಡೆ ಸಮಾರಂಭ ಬಿ.ಸಿ.ರೋಡ್ ನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.

ಮೂಡೂರು-ಪಡೂರು ಬಂಟ್ವಾಳ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ನಾಟಕ, ಸಿನಿಮಾಗಳು ಉತ್ತಮ ಕೊಡುಗೆಯನ್ನು ನೀಡಿದೆ. ಇಂತಹ ಕಾರ್ಯಕ್ಕೆ ಯುವಕರು ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.

ಕಲ್ಲಡ್ಕ ನಾಗ ಸುಜ್ಞಾನ ಫ್ರೆಂಡ್ಸ್ ಸ್ಥಾಪಕ ನಾಗರಾಜ್ ಕಲ್ಲಡ್ಕ ಅವರು ಲೋಗೊ ಬಿಡುಗಡೆ ಗೊಳಿಸಿದರು. ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ, ಬಂಟ್ವಾಳ ಅಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್ ಅವರು ಶುಭ ಹಾರೈಸಿದರು.

ಈ ಸಂದರ್ಭ ಬಿ.ಸಿ.ರೋಡ್ ಸ್ವರ್ಣಾಭರಣ ಉದ್ಯಮಿ ಸುನೀಲ್ ಬಿ.ಮಾರ್ನಬಲ್ ಬಝಾರ್ ಗ್ರೂಪ್ಸ್ ಸಂಸ್ಥೆಯ ಮಾಲಕ ಲ| ಸುಧಾಕರ ಆಚಾರ್ಯ, ಬಂಟ್ವಾಳ ಉದ್ಯಮಿ ಜಗನ್ನಾಥ ಬಂಟ್ವಾಳ, ರಂಗ ನಿರ್ದೇಶಕ ರಾಘವೇಂದ್ರ ಕಾರಂತ್ ಮೊಗರ್ನಾಡ್, ರಂಗನಟ ರತ್ನದೇವ್ ಪುಂಜಾಲಕಟ್ಟೆ, ತಾಂಬೂಲ ಕಲಾವಿದೆರ್ ತಂಡದ ಸಂಚಾಲಕ ಜಯರಾಜ ಆತ್ತಾಜೆ, ನಿತ್ಯ ಸಾಯಿ ಕ್ರಿಯೇಶನ್ ಸಂಸ್ಥೆಯ ರಚನ್ ಆಲಾಡಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಾಟಕ ಸಂಗೀತ ನಿರ್ದೇಶಕ ತಂಗವೇಲು ಕೊಯಿಲ ಅವರನ್ನು ಸಮ್ಮಾನಿಸಲಾಯಿತು.
ರಂಗಕಲಾವಿದ ಎಚ್‌ಕೆ ನಯನಾಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಇವರಿಂದ ಎಲ್ಲೆ ದಾದ ಏರೆಗ್ ಗೊತ್ತು? ತುಳು ನಾಟಕ ಪ್ರದರ್ಶನಗೊಂಡಿತು.



