ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನ.26 ರಂದು ವಾಷಿ೯ಕ ಷಷ್ಠಿ ಮಹೋತ್ಸವ ನಡೆಯಲಿದೆ.
ನ.25ರಂದು ಪಂಚಮಿ ಉತ್ಸವ ಪ್ರಯುಕ್ತ ಬೆಳಿಗ್ಗೆ 9 ಗಂಟೆಗೆ ಪವಮಾನ ಅಭಿಷೇಕ, ಕಲಶಾಭಿಷೇಕ, ಗಣಯಾಗ, ಬ್ರಹ್ಮಲಿಂಗೇಶ್ವರ ವಿಗ್ರಹಕ್ಕೆ ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಭಜನೆ ಮತ್ತು ದೇವರಿಗೆ ಪುಷ್ಪಕನ್ನಡಿ ಸಮರ್ಪಣೆ, ಸಂಜೆ 7 ಗಂಟೆಗೆ ರಂಗಪೂಜೆ, ಪಂಚಮಿ ಉತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ನ.26ರಂದು ಬೆಳಿಗ್ಗೆ 5 ಗಂಟೆಗೆ ಉಷಾ ಪೂಜೆ, 7 ಗಂಟೆಗೆ ಪಂಚಾಮೃತ ಅಭಿಷೇಕ, 8.30 ಗಂಟೆಗೆ ಭಜನೆ, 9.30ರಿಂದ ಷಷ್ಠಿ ಮಹೋತ್ಸವ, ಮಧ್ಯಾಹ್ನ 12 ಗಂಟೆಗೆ ದೇವರ ಬಲಿ ಉತ್ಸವ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6 ಗಂಟೆಗೆ ಭಜನೆ ಬಳಿಕ ಪರಿವಾರ ದೈವಗಳಾದ ಮೈಸಂದಾಯ, ರಕ್ತೇಶ್ವರಿ, ಕಲ್ಲುಟಿ೯, ಅಣ್ಣಪ್ಪ ಪಂಜುಲಿ೯ ನೇಮೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ ಕೊಯಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





