ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರದ ಅಂಗವಾಗಿ ಸಾಮೂಹಿಕ ಶ್ರೀ ರುದ್ರ ಪಠಣ ಹಾಗೂ ದುರ್ಗಾ ಸೂಕ್ತ, ಗಣಪತಿ ಅಥರ್ವ ಶೀರ್ಷ ಸೂಕ್ತ, ಅಂಬ್ರಿಣಿ ಸೂಕ್ತ, ಭಾಗ್ಯ ಸೂಕ್ತ, ಪುರುಷ ಸೂಕ್ತ ಶ್ರೀ ಸೂಕ್ತ ಪಠಣ ಕಾರ್ಯಕ್ರಮವು ಇಂದು(ನ. 17) ನಡೆಯಿತು.

ಈ ಸಂದರ್ಭದಲ್ಲಿ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎ ರವಿ ಶಂಕರ್ ಮೈಯ್ಯ , ಮಿಥುನ್ ರಾವ್ ಕೆ , ಎನರಾಮಚಂದ್ರ ಮಯ್ಯ , ಚಂದ್ರ ಮೋಹನ ರಾವ್, ಎಂ ಶಾಂತರಾಮ ಮೈಯ್ಯ, ಎಂ ಜಯರಾಮ ಮೈಯ್ಯ , ವಿಶಾಲ್ ಹೆಗಡೆ, ಧನೇಶ್ವರ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




