ಕಾಸರಗೋಡು: ಜ್ಯುವೆಲ್ಲರಿ ದರೋಡೆ ಪ್ರಕರಣವೊಂದರಲ್ಲಿ ಜಾಮೀನು ಮೂಲಕ ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು 5 ವರ್ಷಗಳ ಬಳಿಕ ಕಾಸರಗೋಡುವಿನ ಬೇಡಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಣಂಗೂರು ಚಾಲ ರಸ್ತೆಯ ಶರೀಫ್ ಯಾನೆ ಮೂಕ್ಕಾನ್ ಶರೀಫ್(47) ಎಂದು ಗುರುತಿಸಲಾಗಿದೆ.

2016 ಅಕ್ಟೋಬರ್ 4 ರಂದು ಮುಂಜಾನೆ ಕುಂಡಂಗುಯಿ ಸುಮಂಗಲಿ ಜ್ಯುವೆಲ್ಲರಿ ಯಲ್ಲಿ ದರೋಡೆ ನಡೆದಿತ್ತು. ಉತ್ತರಪ್ರದೇಶ ನಿವಾಸಿಗಳಾದ 3 ಮಂದಿ 450 ಗ್ರಾಂ ಚಿನ್ನ, 4 ಕಿಲೊ ಬೆಳ್ಳಿ ದೋಚಿದ್ದರು. ಪ್ರಕರಣದ ಮುಖ್ಯ ಆರೋಪಿ ಯಾದಿರಾಂ ರಾಂಲಾಲ್ ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೂಲಕ ಬಿಡುಗಡೆಗೊಂಡ ಶರೀಫ್ ಅನಂತರ ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.





