Breaking
10 May 2026, Sun

ಬೈಕ್, ಡಿಸೇಲ್ ಟ್ಯಾಂಕರ್ ಲಾರಿ ನಡುವೆ ಬೀಕರ ಅಪಘಾತ,ಸವಾರ ಸಾವು

ಶಿವಮೊಗ್ಗ: ಬೈಕ್ ಸವಾರ ಹಾಗೂ ಡಿಸೇಲ್ ಟ್ಯಾಂಕರ್ ಲಾರಿ ನಡುವೆ ಬೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಮುಖ್ಯರಸ್ತೆಯಲ್ಲಿ ನಡೆದಿದೆ.

ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಕುಡುವಳ್ಳಿ ಹಿರೇಬೇಯ್ಲಿನ ವೆಂಕಟೇಶ್ (59)ಮೃತಪಟ್ಟ ದುರ್ದೈವಿ. ಡಿಸೇಲ್ ಟ್ಯಾಂಕರ್ ಲಾರಿ ಬೆಜ್ಜವಳ್ಳಿ ಸಮೀಪ ಬಂದಾಗ ಈ ಅವಘಡ ಸಂಭವಿಸಿದೆ.

ಮಾಳೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *