Breaking
23 Mar 2026, Mon

ಕುತ್ತಿಗೆಗೆ ಟವೆಲ್ ಸಿಲುಕಿಕೊಂಡು ಬಾಲಕ ಸಾವು

ಕೇರಳ: ಬಾಲಕನೊಬ್ಬ ಆಟವಾಡುವಾಗ ಕುತ್ತಿಗೆಗೆ ಟವೆಲ್ ಸಿಲುಕಿಕೊಂಡು ಸಾವನ್ನಪ್ಪಿದ ಘಟನೆ ಕೇರಳ ಪಾಲಕ್ಕಾಡ್ ನಲ್ಲಿ ನ.14 ರಂದು ನಡೆದಿದೆ.

ಪಾಲಕ್ಕಾಡ್ ನ ಚೆರುವಸ್ಸೆರಿ ಪಳ್ಳಿಯಾಲ್ ನಿವಾಸಿ ಮುಜೀಬ್ ಎಂಬವರ ಪುತ್ರ ಮೊಹಮ್ಮದ್ ಆಶಿಕ್ (9) ಮೃತಪಟ್ಟ ದುರ್ದೈವಿ.

ಸಂಜೆ 4.30 ರ ಸುಮಾರಿಗೆ ಆಟವಾಡುವಾಗ ಆಶಿಕ್ ಕುತ್ತಿಗೆಗೆ ಟವೆಲ್ ಸಿಕ್ಕಿಕೊಂಡು ನೆಲಕ್ಕೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *