ಬಂಟ್ವಾಳ: ಕಿರು ಚಿತ್ರ ನಿರ್ಮಾಣದ ಯುವಕರ ತಂಡದ ನೂತನ ಸಂಸ್ಥೆ ಎನ್ ಎಸ್ ಸಿನಿ ಕ್ರಿಯೇಶನ್ಸ್ ಬಿ.ಸಿ.ರೋಡ್ ಇದರ ಉದ್ಘಾಟನೆ ಮತ್ತು ಲೋಗೋ ಬಿಡುಗಡೆ ಸಮಾರಂಭ ಹಾಗೂ ನಾಟಕ ಪ್ರದರ್ಶನವು ನ. 16 ರಂದು ಬಿ.ಸಿ.ರೋಡ್ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ.

ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ ಅನಾರೋಗ್ಯಕ್ಕೊಳಗಾದ ಕಲಾವಿದನಿಗೆ ಆರ್ಥಿಕ ಸಹಾಯ ವಿತರಣೆ, ಸಾಧಕರಿಗೆ ಸನ್ಮಾನ ಬಳಿಕ 7 ಗಂಟೆಯಿಂದ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಇವರಿಂದ ಎಲ್ಲೆ ದಾದ ಏರೆಗ್ ಗೊತ್ತು? ತುಳು ಹಾಸ್ಯ, ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಿನಿ ಸಂಸ್ಥೆ ಯ ಸಂಚಾಲಕ ರಚನ್ ಆಲಾಡಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





