Breaking
22 Mar 2026, Sun

ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರಿಂದ ತಯಾರಿಸಲಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ

ಶಿರಸಿ: ಸೇವಾಧಾಮದಿಂದ ಪುನಶ್ಚೇತನಗೊಂಡ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ತಯಾರಿಸಿದ ವಿವಿಧ ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವು ನ. 8 ಮತ್ತು 9ರಂದು ಶಿರಸಿಯಲ್ಲಿ ನಡೆಯಿತು.

ಸೌಜನ್ಯ ತೆಲಂಗರವರ ನೇತೃತ್ವದಲ್ಲಿ, ಶ್ರೀ ಕೃಷ್ಣರವರ ಸಹಕಾರದೊಂದಿಗೆ ಪ್ರಥಮ ಬಾರಿಗೆ ಇನ್ನರ್ ವೀಲ್ ಕ್ಲಬ್ ಆಯೋಜಿಸಿದ ಸಂಪ್ರೀತಿ ಕಾರ್ಯಕ್ರಮದಲ್ಲಿ ದಿವ್ಯಾಂಗರು ಸ್ವಯಂ ತಯಾರಿಸಿದ ಬತ್ತಿಕಟ್ಟು, ಹೂಗಳು, ಉಣ್ಣೆಯ ವಸ್ತುಗಳು, ಗೊಂಬೆಗಳು ಸೇರಿದಂತೆ ಹಲವು ವಿಧದ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು.

ಮಳಿಗೆಯ ಸಂಪೂರ್ಣ ನಿರ್ವಹಣೆಯನ್ನು ದಿವ್ಯಾಂಗರೇ ಮಾಡಿದ್ದು, ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಕಾರ್ಯಕ್ರಮದ ಕೊನೆಯಲ್ಲಿ ಸುಮಾರು 19ಸಾವಿರ ಮೌಲ್ಯದ ವ್ಯಾಪಾರ ನಡೆದಿದೆ.

Leave a Reply

Your email address will not be published. Required fields are marked *