Breaking
22 Mar 2026, Sun

ಕಾಸರಗೋಡಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಪ್ರಕರಣದ ಆರೋಪಿಗಳಿಗೆ 2 ವರ್ಷ ಕಠಿಣ ಸಜೆ, 30 ಸಾವಿರ ರೂ. ದಂಡ

ಕಾಸರಗೋಡು: ಗಾಂಜಾ ಸಾಗಿಸುತ್ತಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು 2 ವರ್ಷ ಕಠಿಣ ಸಜೆ, 30. ಸಾವಿರ ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿದೆ.

ಮಟ್ಟನ್ನೂರು ನಿವಾಸಿಗಳಾದ ರನೀಸ್(36), ಮಹರೂಫ್ (35) ಬಂಧಿತ ಆರೋಪಿಗಳಾಗಿದ್ದಾರೆ.

2020 ಆ.1 ರಂದು ಕಾಸರಗೋಡಿನ ಕರಂದಕ್ಕಾಡಿನಲ್ಲಿ ಈ ಇಬ್ಬರು ಆರೋಪಿಗಳು ಜೀಪಿನಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಎಸ್.ಐ.ಇ.ವಿನೋದ್ ಕುಮಾರ್, ವನಿತಾ ಎಸ್.ಐ.ರೂಪ ಮಧುಸೂಧನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿತ್ತು.

Leave a Reply

Your email address will not be published. Required fields are marked *