Breaking
25 Sep 2026, Fri

ಕನ್ಯಾಡಿ ಸೇವಾಭಾರತಿ ವತಿಯಿಂದ ದೀಪಾವಳಿ ಸ್ನೇಹ ಮಿಲನ – 2025

ಉಜಿರೆ: ಕನ್ಯಾಡಿ ಸೇವಾಭಾರತಿ ಸಂಸ್ಥೆ ವತಿಯಿಂದ ದೀಪಾವಳಿ ಸ್ನೇಹ ಮಿಲನ ಕಾರ್ಯಕ್ರಮವು ನ. 9 ರಂದು ಕನ್ಯಾಡಿಯ ಸುಪ್ರಜ ಸಭಾಂಗಣ ಮತ್ತು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು.

ಈ ವೇಳೆ ಸಮಾಜದ ಎಲ್ಲಾ ಗಣ್ಯರನ್ನು ಒಗ್ಗೂಡಿಸಿ ಇವರೆಗೆ ನಡೆದು ಬಂದಂತಹ ದಾರಿಗಳು ಮತ್ತು ಸಂಸ್ಥೆಯ ಸೇವಾಕಾರ್ಯಗಳ ವಿಸ್ತಾರಗಳ ಬಗ್ಗೆ ವರದಿಯನ್ನು ನೀಡಲಾಯಿತು. ಹಾಗೂ ಮುಂದಿನ ದಿನಗಳಲ್ಲಿ ಇದರ ವಿಸ್ತಾರದ ಬಗ್ಗೆ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಲಾಯಿತು.

ಈ ಸಂದರ್ಭದಲ್ಲಿ ಡಾ. ಎಲ್ ಎಚ್ ಮಂಜುನಾಥ್, ಶ್ರೀ ಪುರಂದರ್ ರಾವ್, ಶ್ರೀಮತಿ ಮನೋರಮ ಭಟ್, ಶ್ರೀ ಭುಜಬಲಿ ಧರ್ಮಸ್ಥಳ ಸಹಿತ ಗಣ್ಯರು ಭಾಗವಹಿಸಿದ್ದರು.

ಸಂಸ್ಥೆಯ ಬಗ್ಗೆ ಮತ್ತು ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ವಿವರವನ್ನು ಶ್ರೀ ಕೆ ವಿನಾಯಕ ರಾವ್ ರವರು ಪ್ರಸ್ತಾಪಿಸಿದರು. ಸಂಸ್ಥೆಯ ಸೇವಾಕಾರ್ಯಗಳ ಬಗ್ಗೆ ಶ್ರೀ ಚರಣ್ ಕುಮಾರ್ ಎಂ ರವರು ವಿವರವಿತ್ತರು. ಪಂಚಪರಿವರ್ತನೆಯ ಬಗ್ಗೆ ಶ್ರೀ ಚಂದ್ರಶೇಖರ್ ರವರು ತಿಳಿಸಿದರು.

Leave a Reply

Your email address will not be published. Required fields are marked *