Breaking
9 May 2026, Sat

ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣ: ಹರೀಶ್ ಪೂಂಜರ ಅನುದಾನದಿಂದ ಅಭಿವೃದ್ಧಿ

ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಮಿತ್ತೊಟ್ಟು ಪಾರ ರಸ್ತೆಯು ಕಾಂಕ್ರಿಟೀಕರಣ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.

ಮೇಲಂತಬೆಟ್ಟು ಗ್ರಾಮದ ಮೂಡಲ ಭಾಗದ ಜನರ ಬಹು ಬೇಡಿಕೆಯ ರಸ್ತೆ ಅಭಿವೃದ್ಧಿಗೆ ನೀಡಿದ್ದ ಭರವಸೆಯಂತೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರು ರೂ.೧೦ ಲಕ್ಷ ಅನುದಾನ ಮಂಜೂರು ಮಾಡಿದ್ದು, ಆ ಮೊತ್ತದಿಂದ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದೆ.

ಕಾಮಗಾರಿಯನ್ನು ಶಕ್ತಿ ಕೇಂದ್ರ ಪ್ರಮುಖರಾದ ದಿನಕರ್ ಕುಲಾಲ್, ಬೂತ್ ಸಮಿತಿ ಅಧ್ಯಕ್ಷರಾದ ದಿನೇಶ್ ಪೂಜಾರಿ, ಶ್ಯಾಮ್ ಸುಂದರ್ ಭಟ್, ಪಡoಗಡಿ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಸುವರ್ಣ, ಪಂಚಾಯತ್ ಸದಸ್ಯರಾದ ಅಶೋಕ್ ಸಫಲ್ಯ, ಶ್ರೀಮತಿ ಸುಮತಿ, ಕಾರ್ಯಕರ್ತರಾದ ನಿತೇಶ್ ಪೂಜಾರಿ ಹಾಗೂ ಕಾರ್ಯಕರ್ತರು ವೀಕ್ಷಣೆ ಮಾಡಿದರು.

ಇದೇ ವೇಳೆ ಮೇಲಂತಬೆಟ್ಟು ಗ್ರಾಮದ ಕೋಟಿ ಕಟ್ಟೆ ಕೊಡಿಯೇಲ್ ಭಾಗದ ಜನರ ಬಹು ಬೇಡಿಕೆಯ ರಸ್ತೆ ಅಭಿವೃದ್ದಿಗೆ ನೀಡಿದ ಭರವಸೆಯಂತೆ ಕಾಂಕ್ರಿಟೀರಣ ರಸ್ತೆ ನಿರ್ಮಾಣಕ್ಕೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ರೂ.25 ಲಕ್ಷ ಅನುದಾನ ನೀಡಿದ್ದು ಕಾಮಗಾರಿ ಪೂರ್ಣಗೊಂಡಿದೆ ಹಾಗೂ ಮೇಲಂತಬೆಟ್ಟು ಗ್ರಾಮದ ಮೂಡಲ ಭಾಗದ ಜನರ ಬಹು ಬೇಡಿಕೆಯ ರಸ್ತೆ ಅಭಿವೃದ್ದಿಗೆ ನೀಡಿದ ಭರವಸೆಯಂತೆ ಕಾಂಕ್ರಿಟೀರಣ ರಸ್ತೆ ನಿರ್ಮಾಣಕ್ಕೆ ರೂ.20 ಲಕ್ಷ ಅನುದಾನ ನೀಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರನ್ನು ಗ್ರಾಮಸ್ಥರು ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಹರೀಶ್ ಪೂಂಜಾರವರಿಗೆ ಗ್ರಾಮಸ್ಥರೆಲ್ಲರೂ ಸೇರಿ ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *