Breaking
25 Sep 2026, Fri

ಯಕ್ಷ ಚಂದ್ರಿಕೆ ಬಿರುದಾಂಕಿತ ಶಶಿಕಾಂತ್ ಶೆಟ್ಟಿ ಆಸ್ಪತ್ರೆಗೆ ದಾಖಲು

ಉಡುಪಿ: ತೆಂಕು-ಬಡಗಿನ ಪ್ರಖ್ಯಾತ ಯಕ್ಷಗಾನ ಕಲಾವಿದ, ಖ್ಯಾತ ಸ್ತ್ರೀ ವೇಷಧಾರಿ, ಯಕ್ಷ ಚಂದ್ರಿಕೆ ಬಿರುದಾಂಕಿತ ಶಶಿಕಾಂತ್ ಶೆಟ್ಟಿಯವರಿಗೆ ಅನಾರೋಗ್ಯ ಕಾಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಶಶಿಕಾಂತ್ ಶೆಟ್ಟಿಯವರು ಕೆಮ್ಮು ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೀಗಾಗಿ ಯಕ್ಷಗಾನ ಅಭಿಮಾನಿಗಳು ಶಶಿಕಾಂತ್ ಶೆಟ್ಟಿಯವರು ಶೀಘ್ರವಾಗಿ ಗುಣಮುಖರಾಗಿ ಬರಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

Leave a Reply

Your email address will not be published. Required fields are marked *