ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ವಕೀಲರಾದ ಆಶಾಮಣಿಯವರು ಹಿಂದಿನ ಕಾಲದ ಜನರು ಪೌಷ್ಟಿಕ ಆಹಾರ ಸೇವನೆಯಿಂದ ಯಾವ ರೀತಿ ತಮ್ಮ ಅರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಂಡಿದ್ದರು ಎಂಬುದರ ಬಗ್ಗೆ, ಹಾಗೂ ಹಿಂದಿನ ಕಾಲದ ತಿಂಡಿ ತಿನಿಸುಗಳ ಬಗ್ಗೆ ಮಾಹಿತಿ ನೀಡಿದರು.

ಜ್ಞಾನ ವಿಕಾಸ ಕೇಂದ್ರದ ಸಮನ್ವಯಧಿಕಾರಿ ಸವಿತಾ ಪ್ರಾಸ್ತವಿಕ ಮಾತಾಡಿದರು.
ಈ ಸಂದರ್ಭ ಪತೃಕರ್ತರಾದ ಸಂದೀಪ್ , ವಲಯದ ಮೇಲ್ವಿಚಾರಕರು ಗಿರೀಶ್, ಒಕ್ಕೂಟದ ಅಧ್ಯಕ್ಷರಾದ ಸಂಧ್ಯಾ ಹೆಗ್ಗಡೆ, ಸೇವಾ ಪ್ರತಿನಿಧಿಯಾದ ವನಜಾಕ್ಷಿ , ಲಕ್ಷ್ಮಿ ಜ್ಞಾನ ವಿಕಾಸ್ ಕೇಂದ್ರ ದ ಸಂಯೋಜಕೀ ಸೈನಜ್ ಹಾಗೂ ಜ್ಞಾನವಿಕಾಸದ ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.





