Breaking
19 Sep 2026, Sat

ಪಾಣೆಮಂಗಳೂರಿನ ಹಳೆಯ ಸೇತುವೆಯಲ್ಲಿ ಆಟೋ ನಿಲ್ಲಿಸಿ ನಾಪತ್ತೆಯಾಗಿದ್ದ ಪ್ರೀತಂ ಲೋಬೋ ಮೃತದೇಹ ಪತ್ತೆ

ಬಂಟ್ವಾಳ : ಪಾಣೆಮಂಗಳೂರಿನ ಹಳೆಯ ಸೇತುವೆಯಲ್ಲಿ ಆಟೋ ನಿಲ್ಲಿಸಿ ನಾಪತ್ತೆಯಾಗಿದ್ದ ಮಾರ್ನಬೈಲು ನಿವಾಸಿ ಪ್ರೀತಂ ಲೋಬೋ ಅವರ ಮೃತದೇಹ ಇಂದು (ಅ.30) ನೇತ್ರಾವತಿ ನದಿಯ ಡ್ಯಾಂ ಸಮೀಪ ಮರವೊಂದರಲ್ಲಿ ಪತ್ತೆಯಾಗಿದೆ.

ಅ. 29 ರಂದು ಸ್ಥಳೀಯ ಈಜುಗಾರರು, ಬಂಟ್ವಾಳ ಅಗ್ನಿಶಾಮಕ ಮತ್ತು ತುರ್ತು ಸೇವಾ ದಳದ ಸಿಬ್ಬಂದಿ ದಿನಪೂರ್ತಿ ನದಿಯಲ್ಲಿ ಶೋಧ ನಡೆಸಿದ್ರೂ, ಯಾವುದೇ ರೀತಿಯ ಸುಳಿವು ದೊರಕಿರಲಿಲ್ಲ. ಆದರೆ ಇಂದು ಮೃತದೇಹ ಮರವೊಂದರಲ್ಲಿ ಸಿಲುಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ

Leave a Reply

Your email address will not be published. Required fields are marked *