ಬಂಟ್ವಾಳ: ಕರ್ನಾಟಕ ರಾಜ್ಯ ವಿಧಾನ ಪರಿಷತ್ ಗೆ ದ. ಕನ್ನಡ ಸ್ಥಳೀಯ ಸಂಸ್ಥೆಗಳಿಂದ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ನಿರೀಕ್ಷೆಗೂ ಮೀರಿ ಅಭೂತ ಪೂರ್ವ ಭರ್ಜರಿ ಜಯಗಳಿಸಿದ ಹಿನ್ನಲೆಯಲ್ಲಿ ಬಂಟ್ವಾಳ ತಾಲ್ಲೂಕಿನ ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸ್ಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಚುನಾವಣೆಯ ಬಂಟ್ವಾಳ ಮಂಡಲದ ಚುನಾವಣಾ ಸಂಚಾಲಕರಾದ ಪ್ರಭಾಕರ ಪ್ರಭು,ಸಂಗಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಶ್ ಕುಲಾಲ್,ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ರತ್ನಕುಮಾರ್ ಚೌಟ,ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಪೂಜಾರಿ, ದಾಮೋದರ ಪೂಜಾರಿ, ಉದಯ ಪೂಜಾರಿ, ಚಂದ್ರ ಪೂಜಾರಿ ಕುಕ್ಕಿಪಾಡಿ, ಸಿದ್ದಕಟ್ಟೆ ಸಿ. ಎ. ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ,ಪ್ರಮುಖರಾದ ನವೀನ್ ಹೆಗ್ಡೆ, ಚಂದ್ರಶೇಖರ ಕರ್ಪೆ, ಭೋಜ ಶೆಟ್ಟಿಗಾರ್, ದೀಪಕ್ ಶೆಟ್ಟಿಗಾರ್,ಚೇತನ್ ಕುಲಾಲ್,ನಿತೇಶ್ ಆರಂಬೋಡಿ,ದೇವಪ್ಪ ಗೌಡ, ಬೂಬ ಶೆಟ್ಟಿಗಾರ್,ಜಯವರ್ಮ ಜೈನ್,ಮತ್ತಿತರರು ಉಪಸ್ಥಿತರಿದ್ದರು