ಮೈಸೂರು: ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ಕಾಪಾಡಲು ಹೋಗಿ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ವರುಣ ನಾಲೆಯಲ್ಲಿ ನಡೆದಿದೆ.
ನಂದನ್ (25) ಮತ್ತು ರಾಕೇಶ್ (20) ಮೃತರು.

ಮಂಜು ಎಂಬಾತ ವರುಣ ನಾಲೆಯಲ್ಲಿ ಈಜಲು ಹೋಗಿದ್ದ. ಈ ವೇಳೆ ಮಂಜು ಅಚಾನಕ್ಕಾಗಿ ನೀರಲ್ಲಿ ಮುಳುಗಿದ್ದು, ಇದನ್ನು ಗಮನಿಸಿದ ಇಬ್ಬರು ಯುವಕರು ನಾಲೆಗೆ ಹಾರಿ ಮಂಜುವನ್ನು ಕಾಪಾಡಿದ್ದಾರೆ. ಆದರೆ ಯುವಕರು ನೀರಿನ ಸೆಳೆತಕ್ಕೆ ಸಿಲುಕಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.




