Breaking
23 Mar 2026, Mon

ಯುವಕರಿಗೆ ಮಾರಣಾಂತಿಕವಾಗಿ ಇರಿದ ಪ್ರಕರಣ: ತಲೆಮರೆಸಿಕೊ೦ಡಿದ್ದ ಆರೋಪಿ ಪೊಲೀಸ್ ವಶಕ್ಕೆ

ಕಾಸರಗೋಡು: ಯುವಕರಿಗೆ ಮಾರಣಾಂತಿಕವಾಗಿ ಇರಿದ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ತಲೆಮರೆಸಿಕೊ೦ಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೊಗ್ರಾಲು ಪುತ್ತೂರು ಪನ್ನಿಕುನ್ನು ನಿವಾಸಿ ಕೆ.ಎ.ಮುಹಮ್ಮದ್ (45) ಬಂಧಿತ ಆರೋಪಿ.

2016 ಮೇ 6 ರಂದು ಕುಂಬಳೆ ಬದ್ರಿಯಾ ನಗರದ ಮುಹಮ್ಮದ್ ಹನೀಫ ಮತ್ತು ಪೂಚಕಣ್ಣನ್ ಶಂಶು ಎಂಬವರಿಗೆ ಮಾರಣಾಂತಿಕವಾಗಿ ಇರಿಯಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತನಾತ ಮುಹಮ್ಮದ್ ಅನಂತರ ಜಾಮೀನು ಪಡೆದು ತಲೆಮರೆಸಿಕೊಂಡಿದ್ದನು. ಸದ್ಯ ಈತ ಮನೆಗೆ ಬಂದಿದ್ದಾನೆ ಎಂಬ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *