ಕುಂಬಳೆ: ವ್ಯಕ್ತಿಯೊಬ್ಬರು ನಾಪತ್ತೆಯಾದ ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾಸ್ಕರ ನಗರದಲ್ಲಿ ಅ.25 ರಂದು ನಡೆದಿದೆ.
ವಿ.ಮನೋಹರ (50) ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ.

ಈ ಕುರಿತು ವಿ.ಮನೋಹರ ಅವರ ಪತ್ನಿ ಮಂಜುಷ ಪೊಲೀಸರಿಗೆ ದೂರು ನೀಡಿದ್ದಾರೆ. ಇಂದು ಬೆಳಗ್ಗೆ ಮನೋಹರ ಮನೆಯಿಂದ ಹೊರಕ್ಕೆ ಹೋಗಿದ್ದಾರೆ.
ತನಗೆ ಯಾರೂ ಇಲ್ಲ..ಅಮ್ಮ ನನ್ನನ್ನು ಕರೆಯುತ್ತಿದ್ದಾರೆ..ನಾನು ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿದ್ದರೆಂದು ಪತ್ನಿ ಮಂಜುಷ ದೂರಿನಲ್ಲಿ ತಿಳಿಸಿದ್ದಾರೆ.

ಕುಂಬಳೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



