Breaking
29 Jun 2026, Mon

ಗ್ಯಾಸ್ ಗೀಸರ್ ಸೊರಿಕೆಯಿಂದ ಸ್ನಾನಕ್ಕೆ ಹೊದ ಅಕ್ಕ ತಂಗಿ ಉಸಿರುಗಟ್ಟಿ ಸಾವು

ಮೈಸೂರು; ಗ್ಯಾಸ್ ಗೀಸರ್ ಸೊರಿಕೆಯಿಂದ ಸ್ನಾನಕ್ಕೆ ಹೊದ ಅಕ್ಕ ತಂಗಿ ಉಸಿರುಗಟ್ಟಿ ಸಾವನಪ್ಪಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಮೃತರನ್ನು ಗುಲ್ಫಾರ್ಮ್ (23) ಮತ್ತು ಸಿಮ್ರಾನ್ ತಾಜ್ (20) ಎಂದು ಗುರುತಿಸಲಾಗಿದೆ.

ಇಬ್ಬರೂ ಸ್ನಾನ ಮಾಡಲು ಬಾತ್ ರೂಮ್ ಒಳಗೆ ತೆರಳಿದ್ದವರು ಬಹಳ ಹೊತ್ತಾದರೂ ಹೊರಬಂದಿರಲಿಲ್ಲ. ಹೀಗಾಗಿ ಅವರ ತಂದೆ ಅಲ್ತಾಫ್ ಬಾಗಿಲು ಒಡೆದು ನೋಡಿದ್ದಾರೆ. ಆಗ ಇಬ್ಬರೂ ಅರೆಪ್ರಜ್ಞಾವಸ್ಥೆಯಲ್ಲಿ ಇರುವುದು ಕಾಣಿಸಿದೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *