Breaking
24 Mar 2026, Tue

ತುಮಕೂರು – ಬೆಂಗಳೂರು ರಾ. ಹೆ ಭೀಕರ ಅಪಘಾತ, ದಂಪತಿ ಸ್ಥಳದಲ್ಲೇ ಸಾವು

ಗದಗ: ಲಾರಿ, ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ತುಮಕೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅ.24 ರಂದು ನಡೆದಿದೆ.

ರೋಣ ತಾಲೂಕಿನ ಕೃಷ್ಣಾಪೂರ ಮೂಲದ ಶಿವನಗೌಡ (60) ಮತ್ತು ಪತ್ನಿ ಪ್ರಮೀಳಾ (55) ಮೃತ ದುರ್ದೈವಿಗಳು

ಕುಟುಂಬದ ಮೂಲಗಳ ಪ್ರಕಾರ ಮೃತ ಪ್ರಮೀಳಾ ಪಾಟೀಲ ಅವರ ತಾಯಿ ಹೊನ್ನಮ್ಮ ಪೊಲೀಸ್ ಪಾಟೀಲ ಅವರಿಗೆ ಹೃದಯ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಗಾಗಿ ರೋಣದಿಂದ ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ತೆರಳುತ್ತಿದ್ದಾಗ ನೆಲಮಂಗಲ ತಾಲೂಕಿನ ಟಿ. ಬೇಗೂರ ಬಳಿ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ.

ಈ ಭೀಕರ ಅಪಘಾತದಲ್ಲಿ ಶಿವನಗೌಡ, ಪ್ರಮೀಳಾ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನುಳಿದ ಹೊನ್ನಮ್ಮ ಪೊಲೀಸ್ ಪಾಟೀಲ, ಬಸವರಾಜ ಗಂಗರಗೊಂಡ, ಸುನೀಲ ಸೋಮನಗೌಡ್ರ ಅವರಿಗೆ ಗಾಯಗಳಾಗಿವೆ.

Leave a Reply

Your email address will not be published. Required fields are marked *