Breaking
25 Sep 2026, Fri

ಕನ್ಯಾಡಿ ಸೇವಾಭಾರತಿಯಿಂದ 7 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

ಬೆಳ್ತಂಗಡಿ: ಬೆಂಗಳೂರು ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸಬಿಲಿಟಿಯ ಸಹಕಾರದೊಂದಿಗೆ ಸೇವಾಭಾರತಿಯ ಅಂಗಸಂಸ್ಥೆಯಾದ ಸೇವಾಧಾಮದಿಂದ ಗುರುತಿಸಲ್ಪಟ್ಟ ಬೆನ್ನುಹುರಿ ಅಪಘಾತಕ್ಕೊಳಗಾದ ಶಿಬಾಜೆಯ ಮೋಹನ್ ಪಿಬಿ,ಶ್ರೀ ಮಹೇಶ್ ಗುತ್ತಿಗಾರು, ನಿಡ್ಲೆಯ ಚಂದ್ರಶೇಖರ್ ಭಟ್, ಪುತ್ತೂರಿನ ಜೈನಾಬಿ, ಬದಿಯಡ್ಕದ ಚಂದ್ರಶೇಖರ್, ಕಡಬದ ಧನಂಜಯ ಮತ್ತು ಶ್ರೀ ಯೋಗೀಶ್ ಎರ್ಮಲ್ ರವರಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮವನ್ನು ಅಕ್ಟೋಬರ್ 20 ದೀಪಾವಳಿ ಹಬ್ಬದಂದು ಬೆಳ್ತಂಗಡಿ ತಾಲೂಕಿನ ಸೌತಡ್ಕ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪುತ್ತೂರಿನ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರಾದ ರೂಪಲೇಖರವರು ಗಾಲಿಕುರ್ಚಿಗಳನ್ನು ಹಸ್ತಾಂತರಿಸಿ ಫಲಾನುಭವಿಗಳಿಗೆ ವಿಶ್ವಾಸ ಬದುಕಿಗಾಗಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸೇವಾಧಾಮ ಸಂಸ್ಥಾಪಕರಾದ ಕೆ . ವಿನಾಯಕ ರಾವ್, ಬೆನ್ನು ಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು, ಆರೈಕೆದಾರರು, ಫಲಾನುಭವಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *