Breaking
25 Sep 2026, Fri

ಆಟೋ ರಿಕ್ಷಾದಲ್ಲಿ ಅಕ್ರಮ ಗೋ ಮಾಂಸ ಸಾಗಾಟ, ಪ್ರಕರಣ ಬೇಧಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ : ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದಾಗ ಪ್ರಕರಣವನ್ನು ಬೆಳ್ತಂಗಡಿಯ ಠಾಣೆಯ ಪೊಲೀಸರು ಬೇಧಿಸಿದ್ದಾರೆ. ಅ

ಅ.23 ರಂದು ಆಟೋದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿಯೊಂದು ಬಂದಿದೆ. ಅದರಂತೆ ಮಧ್ಯಾಹ್ನ ಸುಮಾರು 2:30 ಕ್ಕೆ ಕಿಲ್ಲೂರು ರಸ್ತೆಯಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು ಬೆಳ್ತಂಗಡಿ ತಾಲೂಕಿನ ಲಾಯಿಲ ಜಂಕ್ಷನ್ ನಲ್ಲಿ ತಡೆದು ನಿಲ್ಲಿಸಿ ಪರಿಶೀಲನೆಗೆ ಮುಂದಾದಾಗ ರಿಕ್ಷಾ ಚಾಲಕ ಲಾಯಿಲ ನಿವಾಸಿ ಹಕೀಂ(27) ಪೊಲೀಸರನ್ನು ನೋಡಿ ತಪ್ಪಿಸಿಕೊಂಡು ಓಡಿ ಪರಾರಿಯಾಗಿದ್ದಾನೆ.

ಈ ವೇಳೆ ಆಟೋ ರಿಕ್ಷಾದೊಳಗೆ ಪರಿಶೀಲನೆ ನಡೆಸಿದಾಗ 85 ಕೆ.ಜಿ ಗೋಮಾಂಸ ಪತ್ತೆಯಾಗಿದ್ದು. ಆಟೋದ ಮೌಲ್ಯ ರೂಪಾಯಿ 2,50,000 ಮತ್ತು ಗೋಮಾಂಸದ ಮೌಲ್ಯ 21,250 ರೂಪಾಯಿ ಆಗಿದ್ದು ವಶಪಡಿಸಿಕೊಂಡು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 12 ಕರ್ನಾಟಕ ಗೋವಧೆ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ ನೇತೃತ್ವದ ಸಬ್ ಇನ್ಸ್ಪೆಕ್ಟರ್ ಆನಂದ.ಎಮ್ ಮತ್ತು ಸಿಬ್ಬಂದಿ ಭಾಗವಹಿಸಿದರು.

Leave a Reply

Your email address will not be published. Required fields are marked *