Breaking
24 Mar 2026, Tue

ಮನೆ ಮುಂದೆ ಹಚ್ಚಿದ ದೀಪದಿ೦ದ ಅಗ್ನಿ ಅವಘಡ

ಬಾಗಲಕೋಟೆ: ದೀಪಾವಳಿ ಹಿನ್ನೆಲೆ ಮನೆ ಬಾಗಿಲಿನ ಬಳಿ ಹಚ್ಚಿದ ದೀಪದಿ೦ದ ಅಗ್ನಿ ಅವಘಡ ಸ೦ಭವಿಸಿ 7 ಮಂದಿ ಗಾಯಗೊ೦ಡ ಘಟನೆ ಬಾಗಲಕೋಟೆ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ.

ನಗರದ ರಾಜೇಂದ್ರ ತಪಶೆಟ್ಟಿಯವರ ಮನೆಯ ಎದುರು ದೀಪ ಹಚ್ಚಲಾಗಿದ್ದು, ದೀಪದಿಂದ ಮನೆ ಎದುರಿಗೆ ಚೆಲ್ಲಿದ್ದ ಆಯಿಲ್‌ಗೆ ಬೆಂಕಿ ತಗುಲಿದೆ. ಇದರಿಂದ ಮನೆ ಮುಂದಿನ 3 ಬೈಕ್ ಸುಟ್ಟು ಕರಕಲಾಗಿದ್ದು, ಬಳಿಕ ಮನೆಗೆ ಬೆಂಕಿ ತಗುಲಿದ್ದು, ಅಡುಗೆ ಮನೆಯ ಸಿಲಿಂಡರ್ ಕೂಡ ಸೋರಿಕೆಯಾಗಿದೆ. ಇದರಿಂದ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ.

ಮೇಲ್ಮಹಡಿಯಲ್ಲಿದ್ದ 7 ಮಂದಿಗೆ ಸಣ್ಣಪುಟ್ಟಗಾಯಗಳಾಗಿದ್ದು, ಅದೃಷ್ಟವಶಾತ್ ತಪಶೆಟ್ಟಿ ಕುಟು೦ಬಸ್ಥರು ಮನೆ ಬಿಟ್ಟು ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬ೦ದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ರಾಜೇಂದ್ರ ತಪಶೆಟ್ಟಿ ಬೋರ್‌ವೆಲ್ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಬೇಕಾದ ಆಯಿಲ್ ಸಂಗ್ರಹಿಸಿದ್ದರು. ಅದಕ್ಕೆ ದೀಪದ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಈ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *