Breaking
24 Mar 2026, Tue

ಗಾಂಜಾ ವಶ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ಮಂಜೇಶ್ವರ ಠಾಣಾ ಪೊಲೀಸರು

ಕಾಸರಗೋಡು: ವರ್ಕಾಡಿ ಸುಳ್ಯಮೆಯಿಂದ ಸುಮಾರು 116 ಕಿಲೋ ಗಾಂಜಾ ವಶ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೈಸೂರು ಜಯಪುರ ಹೋಬಳಿಯ ಸಿದ್ದೇಗೌಡ (25) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 8 ರಾತ್ರಿ ಸುಳ್ಯಮೆಯ ಮನೆಯ ಶೆಡ್ ವೊಂದರಲ್ಲಿ ಬಚ್ಚಿಟ್ಟಿದ್ದ ಗಾಂಜಾ ವನ್ನು ವಶಪಡಿಸಿಕೊಂಡಿದ್ದರು. ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಮಿನಿ ಟೆಂಪೋ ವನ್ನು ವಶಕ್ಕೆ ತೆಗೆದುಕೊಂಡಿದ್ದರು ಪೊಲೀಸರು ನಡೆಸಿದ ತನಿಖೆಯಿಂದ ವಾಹನ ಚಾಲಕ ಸಿದ್ದೆ ಗೌಡ ನ ಮಾಹಿತಿ ಲಭಿಸಿತ್ತು.

ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆಯನ್ನು ಮೈಸೂರಿಗೆ ವಿಸ್ತರಿಸಲಾಗಿದೆ.

Leave a Reply

Your email address will not be published. Required fields are marked *