Breaking
25 Sep 2026, Fri

ಪಡುಬಿದ್ರೆಯಲ್ಲಿ ಆಟೋ ರಿಕ್ಷಾಕ್ಕೆ ಲಾರಿ ಢಿಕ್ಕಿ , ರಿಕ್ಷಾ ಚಾಲಕ ಸಾವು

ಪಡುಬಿದ್ರೆ: ಲಾರಿಯೊಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟ ಘಟನೆ ರಾ. ಹೆ 66ರ ಪಡುಬಿದ್ರೆಯ ಹೆಜಮಾಡಿ ಬೈಪಾಸ್ ಬಳಿ ಅ.17 ರಂದು ಬೆಳಗ್ಗೆ ನಡೆದಿದೆ.

ಹೆಜಮಾಡಿ ಮಾಸ್ತಿಕಟ್ಟೆ ನಿವಾಸಿ ಆಟೋ ರಿಕ್ಷಾ ಚಾಲಕ ರಫೀಕ್ (37) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ರಫೀಕ್ ಅವರು ಇಂದು ಮುಂಜಾನೆ ಮನೆಯಿಂದ ಮಸೀದಿಗೆ ರಿಕ್ಷಾದಲ್ಲಿ ತೆರಳಿದ್ದರು. ಈ ವೇಳೆ ಹೆಜಮಾಡಿ ಬೈಪಾಸ್ ಬಳಿ ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ತಕ್ಷಣ ಗಂಭೀರವಾಗಿ ಗಾಯಗೊಂಡಿದ್ದ ರಫೀಕ್ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ಈ ವೇಳೆ ಮೃತಪಟ್ಟಿದ್ದಾರೆ.

ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *