Breaking
22 Mar 2026, Sun

ಪಾಣೆಮಂಗಳೂರಿನಲ್ಲಿ ಮಾದಕವಸ್ತು ಎಂ.ಡಿ.ಎಂ.ಎ ಸೇವಿಸಲು ಯತ್ನಿಸುತ್ತಿದ್ದಾತನ ಬಂಧನ

ಬಂಟ್ವಾಳ: ಆಟೋದಲ್ಲಿ ಮಾದಕವಸ್ತು ಎಂ.ಡಿ.ಎಂ.ಎ ಸೇವಿಸಲು ಯತ್ನಿಸುತ್ತಿದ್ದಾತನನ್ನು ಪೊಲೀಸರು ಬಂಧಿಸಿರುವ ಘಟನೆ ಬಂಟ್ವಾಳದ ಪಾಣೆಮಂಗಳೂರಿನ ಸ್ಮಶಾನ ರಸ್ತೆಯಲ್ಲಿ ಅ.15 ರಂದು ನಡೆದಿದೆ

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಹಮ್ಮದ್ ಇಮ್ತಿಯಾಜ್(40) ಎಂಬಾನನ್ನು ಪೊಲೀಸರು ಬಂಧಿಸಿದ್ದಾರೆ.

ಅ.15 ರಂದು ಬಂಟ್ವಾಳ ನಗರ ಪೊಲೀಸ್ ಉಪನಿರೀಕ್ಷಕರು ಠಾಣಾ ಸಿಬ್ಬಂದಿಯೊಂದಿಗೆ ಇದ್ದಾಗ ಒಂದು ಆಟೋದಲ್ಲಿ ಒಬ್ಬ ವ್ಯಕ್ತಿಯು ಅನುಮಾನಾಸ್ಪದವಾಗಿ ಇರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮೊಹಮ್ಮದ್ ಇಮ್ತಿಯಾಜ್ ಎಂಬಾತ ಸ್ಮಶಾನದ ಪಕ್ಕ ಆಟೋ ರಿಕ್ಷಾವನ್ನು ನಿಲ್ಲಿಸಿದ್ದು ಆತನನ್ನು ವಿಚಾರಿಸಿದಾಗ ಆತ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಆರೋಪಿ ಅನ್ನೋದು ಗೊತ್ತಾಗಿದೆ.

ಆತನನ್ನು ವಿಚಾರಿಸಿದಾಗ ನನ್ನ ಜೊತೆಯಲ್ಲಿ ಎಂ.ಡಿ.ಎಂ.ಎ ಇದ್ದು, ತಾನು ಅದನ್ನು ಸೇವಿಸಲು ಇಲ್ಲಿ ಬಂದಿರುವುದಾಗಿ ತಿಳಿಸಿದ್ದಾನೆ. ಈ ವೇಳೆ ಆತನ ಬಳಿ ಒಟ್ಟು 0.760 ಗ್ರಾಂ [760 ಮಿಲಿಗ್ರಾಂ] ಎಂ.ಡಿ.ಎಂ.ಎ ಪತ್ತೆಯಾಗಿದೆ.

ವಶಪಡಿಸಿಕೊಂಡ ಎಂ.ಡಿ.ಎಂ.ಎ ಮಾದಕ ಸ್ವತ್ತಿನ ಅಂದಾಜು ಮೌಲ್ಯ ರೂ. 1,000/- ಆಗಬಹುದು ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *