Breaking
25 Sep 2026, Fri

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಅರೆಸ್ಟ್

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರದ ಲಾತೂರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸೋಲಾಪುರ ಮೂಲದ ದಾನಪ್ಪ ನರೋಣಿ ಬಂಧಿತ ಆರೋಪಿಯಾಗಿದ್ದಾನೆ.

ಫೋನ್ ಕರೆ ಮಾಡಿದ ಬಳಿಕ ದಾನಪ್ಪ ನರೋಣಿ ಸೋಲಾಪುರದಿಂದ ಲಾತೂರ್‌ಗೆ ಪರಾರಿಯಾಗಿದ್ದ. ಹೀಗಾಗಿ, ಬೆಂಗಳೂರು ಹಾಗೂ ಕಲಬುರಗಿ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಪ್ರಿಯಾಂಕ್ ಖರ್ಗೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪಿಯನ್ನು ಸದಾಶಿವನಗರ ಠಾಣೆ ಪೊಲೀಸರಿಗೆ ಕಲಬುರಗಿ ಪೊಲೀಸರು ಒಪ್ಪಿಸಲಿದ್ದಾರೆ.

ಗೂಗಲ್‌ನಲ್ಲಿ ಸಚಿವರ ನಂಬರ್ ತೆಗೆದುಕೊಂಡು ದಾನಪ್ಪ ಕರೆ ಮಾಡಿದ್ದು ಫೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.

Leave a Reply

Your email address will not be published. Required fields are marked *