Breaking
21 Jun 2026, Sun

ಅಂತರಾಷ್ಟ್ರೀಯ ಕರಾಟೆಪಟು ಕು. ಶ್ರೇಯಸ್ ಪೂಜಾರಿ ಅವರಿಗೆ “ಕಿತ್ತೂರು ರಾಣಿ ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿ”

ಮಡಂತ್ಯಾರ್: ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.) ಕರ್ನಾಟಕ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿಜಯನಗರ, ಮೈಸೂರು ನೀಡುವ “ಕಿತ್ತೂರು ರಾಣಿ ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿ”ಗೆ ಮಡ್ಯಂತಾರ್ ಮೂಲದ ಅಂತರಾಷ್ಟ್ರೀಯ ಕರಾಟೆಪಟು ಕು. ಶ್ರೇಯಸ್ ಪೂಜಾರಿ ಭಾಜನರಾಗಿದ್ದಾರೆ.

ಅ.19 ರಂದು ಮೈಸೂರಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಭವನದಲ್ಲಿ ನಡೆಯುವ ‘ಕಾವ್ಯಶ್ರೀ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ-2025’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

ಕ್ರೀಡಾ ಕ್ಷೇತ್ರದಲ್ಲಿ ಇವರು ಅತ್ಯುತ್ತಮ ಸಾಧನೆ ಮಾಡಿದ್ದನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *