ಕಾಸರಗೋಡು: ಲಾರಿ ಡಿಕ್ಕಿ ಹೊಡೆದು ಗಾಯಗೊಂಡ ಸ್ಕೂಟರ್ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಕಾಸರಗೋಡುವಿನ ಚೆಂಬರಿಕ ತುರುತ್ತಿ ನಿವಾಸಿ, ಪ್ರಾದೇಶಿಕ ಮುಸ್ಲಿಂ ಲೀಗ್ ನೇತಾರರಾಗಿದ್ದಾರೆ ಅಬ್ದುಲ್ ರಹಮಾನ್(62) ಎಂದು ಗುರುತಿಸಲಾಗಿದೆ.
ಮಂಗಳವಾರದಂದು ಮೇಲ್ಪರಂಬ ಜಂಕ್ಷನ್ ಬಳಿ ಅಬ್ದುಲ್ ರಹಮಾನ್ ಚಲಾಯಿಸಿದ ಸ್ಕೂಟರಿಗೆ ಕಾಸರಗೋಡು ಭಾಗದಿಂದ ಕಾಞಂಗಾಡಿಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಬುಧವಾರ ರಹಮಾನ್ ಅವರು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.




