Breaking
26 Sep 2026, Sat

ಸರ್ಕಾರದ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಕದ್ದು ಸಾಗಾಟಕ್ಕೆ ಯತ್ನ, ಲಾರಿ ಚಾಲಕ ವಶಕ್ಕೆ

ಭಟ್ಕಳ: ಸರ್ಕಾರದ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಕದ್ದು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆ ದಾಳಿ ನಡೆಸಿದ ಭಟ್ಕಳ ಪೊಲೀಸರು ಅಕ್ಕಿ ಸಮೇತ ಲಾರಿ ಚಾಲಕನನ್ನು ಬಂಧಿಸಿದ್ದಾರೆ.

ಲಾರಿ ಚಾಲಕ ಪ್ರವೀಣ್ ಎನ್ ಆರ್ ನನ್ನು ಪೊಲೀಸರ ಬಂಧಿಸಿದ್ದಾರೆ .ಅಕ್ಕಿ ಹೊತ್ತ ಲಾರಿಯು ಭಟ್ಕಳದ ನೂರ ಮಸೀದಿ ಹತ್ತಿರ ಅಕ್ಕಿ ತುಂಬಿದ ಲಾರಿ ಸಂಚಾರ ಮಾಡುತ್ತಿತ್ತು ,ಅದರಲ್ಲಿ 3.23 ಲಕ್ಷ ರೂ ಮೌಲ್ಯದ 9,500 ಕೆಜಿ ಸಾಗಾಟವಾಗುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿಯೊಂದು ಬಂದಿತ್ತು.

ಈ ವೇಳೆ ಅಕ್ರಮ ಅಕ್ಕಿ ಸಾಗಾಟಗಾರ ಮೋಹಮ್ಮದ್ ಸಮೀರ್ ಭಟ್ಕಳ ಲಾರಿಯಲ್ಲಿ ಅಕ್ಕಿ ಸಾಗಿಸುತ್ತಿರುವ ಬಗ್ಗೆ ಅರಿವಾಗಿದ್ದು, ವಾಹನದ ಚಾಲಕ ಪ್ರವೀಣ್ ಎನ್ ಆರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದು , ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *