Breaking
23 Mar 2026, Mon

ಮೈಂದಗುರಿಯಲ್ಲಿ ಬೀದಿನಾಯಿಗಳ ದಾಳಿ : 9 ವರ್ಷದ ಬಾಲಕಿ ಗಂಭೀರ ಗಾಯ

ಮಂಗಳೂರು: ಸುರತ್ಕಲ್ ಕಾನ ಮೈದಗುರಿಯಲ್ಲಿ ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಗಂಭೀರ ಗಾಯಗೊಂಡ ಬಾಲಕಿಯನ್ನು ಮೈಂದಗುರಿ ನಿವಾಸಿ ಹೈದರ್ ಅಲಿ ಅವರ‌ ಮಗಳು ರಿದಾ ಫಾತಿಮ (9) ಎಂದು ಗುರುತಿಸಲಾಗಿದೆ.

ಬಾಲಕಿಯು ಮನೆ ಪಕ್ಕದಲ್ಲಿರುವ ತೆರಳಿದ್ದ ವೇಳೆ ಜಗಳ ಮಾಡಿಕೊಂಡು ನಾಯಿಗಳ ಹಿಂಡೆ ಬಂದಿತು. ಇದರಿಂದ ಬೆಚ್ಚಿಬಿದ್ದ ಬಾಲಕಿ ಮನೆ ಕಡೆಗೆ ಓಡುವಾಗ ಕೈಯ್ಯಲ್ಲಿದ್ದ ಹಣ ಕೆಳಗೆ ಬಿದ್ದಿದೆ. ಹಣವನ್ನು ಹೆಕ್ಕುವಷ್ಟರಲ್ಲಿ ಬಾಲಕಿಯ ಮೇಲೆ ನಾಯಿ ದಾಳಿ ಮಾಡಿದೆ.

ಬಾಲಕಿಯ ಬೊಬ್ಬೆ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಬಾಲಕಿಯನ್ನು ರಕ್ಷಿಸಿ ಸುರತ್ಕಲ್‌ ಸಮುದಾಯ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *