Breaking
25 Sep 2026, Fri

ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೋದ ವ್ಯಕ್ತಿ ನಾಪತ್ತೆ,ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ: ಡಯಾಲಿಸಿಸ್ ಮಾಡಿಸಲು ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನವೀನ ಶೆಟ್ಟಿ ,ಪ್ರವೀಣ್ ಕುಮಾರ್ ಹೆಗ್ಡೆ(47) ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ.

ಬೆಂಗಳೂರು ದಕ್ಷಿಣದ ಶಾಕಾಂಬರಿ ನಗರ ಕನಕಪುರ ಮುಖ್ಯರಸ್ತೆ ಜೆಪಿ ನಗರ 1 ನೇ ಹಂತದ ನಂಜುಡಪ್ಪ ಬಡಾವಣೆ ಬಿಲ್ಡಿಂಗ್ ರೂ ನಂ 71 2 ರಲ್ಲಿ ವಾಸವಿದ್ದ ನವೀನ ಶೆಟ್ಟಿಯವರು ಅ.10 ಡಯಾಲಿಸಿಸ್ ಮಾಡಿಸಲು ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋಗಿದ್ದಾರೆ.

ಪಿರ್ಯಾದಿದಾರನ ಪತ್ನಿ ಅಂಬಿಕಾ ಶೆಟ್ಟಿ ಎಂಬವರು ಸಮಯ ಸುಮಾರು 17:50 ಗಂಟೆಗೆ ಪಿರ್ಯಾದಿದಾರರ ಭಾವ ನವೀನ ಶೆಟ್ಟಿಯವರಿಗೆ ಕರೆ ಮಾಡಿ ವಿಚಾರಿಸಿದ್ದು ಡಯಾಲಿಸಿಸ್ ಮಾಡಿಸಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದು, ನಂತರ ನವೀನ್ ಶೆಟ್ಟಿರವರ ಮೊಬೈಲ್ ಗೆ ಕರೆ ಮಾಡಿದಾಗ ಸ್ವೀಕರಿಸದೇ ಇದ್ದು, ಆತನ ಸ್ನೇಹಿತರು ಮತ್ತು ಆಸ್ಪತ್ರೆಗೆ ಕರೆ ಮಾಡಿ ವಿಚಾರಿಸಿದ್ದು ಎಲ್ಲಿಯೂ ಕಂಡುಬಾರದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿಯಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೀನ್ ಅವರು ಎಲ್ಲಿಯಾದರೂ ಕಂಡುಬಂದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *