Breaking
23 Mar 2026, Mon

ನೆರಿಯದಲ್ಲಿ ಟವರ್ ಇದ್ದರೂ ನೆಟ್ವರ್ಕ್ ಸಮಸ್ಯೆಯಿಂದ ಹೈರಾಣದ ಜನ

ಬೆಳ್ತಂಗಡಿ: ನೆಟ್ವರ್ಕ್ ಸಮಸ್ಯೆಯಿಂದ ಪರದಾಡುತ್ತಿದ್ದ ಸಂದರ್ಭದಲ್ಲಿ ನೆರಿಯ ಬಿ.ಎಸ್.ಎನ್.ಎಲ್. ಟವರ್ ನಿರ್ಮಾಣವಾಗಿ ಸಮಸ್ಯೆ ದೂರವಾಗಿತ್ತು.ಆರಂಭದ ದಿನಗಳಲ್ಲಿ ಉತ್ತಮವಾದ ಸೇವೆ ಗ್ರಾಹಕರಿಗೆ ಸಿಗುತ್ತಿತ್ತು. ಇದೀಗ ಸುಮಾರು ವರ್ಷಗಳಿಂದ ಬಿ.ಎಸ್.ಎನ್.ಎಲ್. ಟವರ್ ನಿಂದ ಪ್ರಯೋಜನ ಇಲ್ಲದಂತಾಗಿದೆ.

ನೆಟ್ವರ್ಕ್ ಇಲ್ಲದೆ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆ ಉಂಟಾಗಿದ್ದು, ನೆರಿಯ ಕಚೇರಿಯಲ್ಲಿ ಸಿಬ್ಬಂದಿ ಕೂಡ ಇಲ್ಲ ವೈಫೈ ಕೇಬಲ್ ಸಮಸ್ಯೆ ಇದ್ದಾಗ ಮಾತ್ರ ಭೇಟಿ ಸ್ಪಂದನೆ ನೀಡುತ್ತಾರೆ. ಉಪಯೋಗವಿಲ್ಲದ ಟವರ್ ಯಾಕೆ ಬೇಕು, ಸರಕಾರದಿಂದ ಸಿಗುವ ಸೌಲಭ್ಯವನ್ನು ಅಧಿಕಾರಿಗಳು ತಡೆ ಮಾಡುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಟವರ್ ಇರುವ ಸ್ಥಳದಲ್ಲಿ ಜನರೇಟರ್ ವ್ಯವಸ್ಥೆ ಇರುತ್ತದೆ. ಆರಂಭದ ದಿನಗಳಲ್ಲಿ ಎಲ್ಲವೂ ಸರಿಯಾದ ವ್ಯವಸ್ತೆ ಇತ್ತು ಇದೀಗ ಕರೆಂಟ್ ಇದ್ದಾಗ ಮಾತ್ರ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಕರೆಂಟ್ ಹೋದ ಮೇಲೆ ಜನರೇಟರ್ ನಿರ್ವಹಣೆ ಇಲ್ಲದೆ ನೆಟ್ವರ್ಕ್ ಸರಕಾರದ ಸೇವೆಗೆ ಓಟಿಪಿ ಬರುವಾಗ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆ ಉಂಟಾಗಿದ್ದು,ಬಿ.ಎಸ್.ಎನ್.ಎಲ್. ನಂಬರ್ ಹೊಂದಿರುವ ಗ್ರಾಹಕರು ಕಕ್ಕಿಂಜೆ ಟವರ್ ನ ವ್ಯಾಪ್ತಿಗೆ ಹೋಗಿ ಓಟಿಪಿ ಹೇಳುವ ಪರಿಸ್ಥಿತಿ ಉಂಟಾಗಿದೆ.

ಗ್ರಾಮದಲ್ಲಿ ದೇವಗಿರಿ ಗಂಡಿಬಾಗಿಲು ಅಂಬಟೆ ಮಲೆ ಅಂತಹ ಪ್ರದೇಶಗಳಿಗೆ ಅಣಿಯೂರುನಲ್ಲಿ ಏರ್ಟೆಲ್ ಟವರ್ ಇದ್ದರೂ ಕೂಡ ಆ ಪ್ರದೇಶಗಳಿಗೆ ನೆಟ್ವರ್ಕ್ ಸಂಪರ್ಕವಿಲ್ಲ.

Leave a Reply

Your email address will not be published. Required fields are marked *