ಶಿಕ್ಷಕಿ ಡಾ.ಶಾಂತಾ ಪುತ್ತೂರು ಅವರಿಗೆ ಶಿಕ್ಷಾರತ್ನ-2025 ಪ್ರಶಸ್ತಿ

ಮಂಗಳೂರು: ಭಾರತದ ಖಾಸಗಿ ವಲಯದ ಐದನೆಯ ಅತಿದೊಡ್ಡ ಲೈಫ್‌ ಇನ್ಸೂರೆನ್ಸ್‌ ( ಬಹು ಉದ್ಯಮ ಸಂಸ್ಥೆ) ಕಂಪೆನಿಯಾಗಿರುವ ಆಕ್ಸಿಸ್ ಮ್ಯಾಕ್ಸ್ ಇನ್ಸೂರೆನ್ಸ್ ಕಂಪೆನಿಯು ಆಯ್ದ ಬಹುಮುಖ ಪ್ರತಿಭೆಗಳಿಗೆ ಕೊಡಮಾಡುವ ಈ ಬಾರಿಯ ಶಿಕ್ಷಾರತ್ನ -2025 ಪ್ರಶಸ್ತಿ ಶಿಕ್ಷಕಿ ಡಾ.ಶಾಂತಾ ಪುತ್ತೂರು ಅವರಿಗೆ ಲಭಿಸಿದೆ.

ಸರಕಾರಿ ಪ್ರೌಢಶಾಲೆ ಕಬಕದಲ್ಲಿ ಶಿಕ್ಷಕಿಯಾಗಿರುವ ಡಾ.ಶಾಂತಾ ಪುತ್ತೂರು ರವರು ಮೂವತ್ತು ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ. ಯೋಗದಲ್ಲಿ ಡಿಪ್ಲೋಮ ಮಾಡಿದ್ದು, ನಲಿಕಲಿ, ಯೋಗರಾಜ್ಯ ಸಂಪನ್ಮೂಲ ವ್ಯಕ್ತಿ ಯಾಗಿ, ಗೈಡ್ಸ್ ಶಿಕ್ಷಕಿಯಾಗಿ, ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.

ಇವರು ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮಸ್ಥಳದ ಬಂಟ್ವಾಳ ತಾಲೂಕು ಯೋಗಸಂಘಟಕಿಯಾಗಿ 8 ವರ್ಷ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕಾಸರಗೋಡು ಕರ್ನಾಟಕ ರಾಜ್ಯ ಸಂಚಾಲಕಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷರು, ಹಾಗೂ ಅನೇಕ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿರುತ್ತಾರೆ. ಇವರ ಸೌರಭ ಕವನ ಸಂಕಲನ ಬಿಡುಗಡೆಯಾಗಿದೆ.

ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಕವನ ಪ್ರಸಾರವಾಗಿದ್ದು, ಲೇಖನ, ವ್ಯಕ್ತಿ ಚಿತ್ರ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಈ ಸಾಧನೆಯನ್ನು ಗುರುತಿಸಿ ಆಕ್ಸಿಸ್ ಮ್ಯಾಕ್ಸ್ ಇನ್ಸೂರೆನ್ಸ್ ಶಿಕ್ಷಾರತ್ನ – 2025 ಪ್ರಶಸ್ತಿ ನೀಡಿ ಗೌರವಿಸಿದೆ. ಇವರೊಂದಿಗೆ ಕವಿ, ಸಂಘಟಕ, ಶಿಕ್ಷಕ, ಪತ್ರಕರ್ತ ಜಯಾನಂದ ಪೆರಾಜೆ, ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ ದೇವಕಿಯವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಟ್ರ್ಯೈ ನಿಂಗ್ ಮ್ಯಾನೇಜರ್ ಸಚಿನ್ ಕೆ.ಎಸ್ ಮ್ಯಾನೇಜರ್ಸ್ ರಿತೇಶ್ ಶೆಟ್ಟಿ, ಆಶ್ರೀತ್ ಎನ್ ,ನಿದೀಶಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *